ನೆಚ್ಚಿನ ಚಾನೆಲ್ ಗಳ ಆಯ್ಕೆ,ಹೊಸ ದರ ಪರಿಷ್ಕರಣೆ 1 ತಿಂಗಳು ಮುಂದೂಡಿಕೆ: ಟ್ರಾಯ್
ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ...
ನವದೆಹಲಿ: ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ.
ನೂತನ ಕೇಬಲ್ ಟಿವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಅರಿವಿನ ಕೊರತೆ ಇದ್ದು, ಇನ್ನೂ ಗೊಂದಲದಲ್ಲಿದ್ದಾರೆ ಎಂಬ ಕಾರಣಕ್ಕೆ, ನೂತನ ವ್ಯವಸ್ಥೆ ಜಾರಿಯನ್ನು ಫೆ.1ಕ್ಕೆ ಮುಂದೂಡಲಾಗಿದೆ ಎಂದು ಟ್ರಾಯ್ ಕಾರ್ಯದರ್ಶಿ ಎಸ್ ಕೆ ಗುಪ್ತ ತಿಳಿಸಿದ್ದಾರೆ.
ನೂತನ ಕೇಬಲ್ ಟೀವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅಂಶಗಳು ಗೊತ್ತಿಲ್ಲದ ಕಾರಣ, ಅವರು ನೂತನ ವ್ಯವಸ್ಥೆ ಬಗ್ಗೆ ಕೋರಿಕೆಯನ್ನೇ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ನೀತಿಯನ್ನು ಯಾವುದೇ ಸಮಸ್ಯೆಯಿಲ್ಲದಂತೆ, ಜಾರಿ ಮಾಡಲು ಹೆಚ್ಚುವರಿ ಸಮಯಾವಕಾಶ ಕಲ್ಪಿಸಬೇಕು ಎಂದು ಟ್ರಾಯ್ ಬಳಿ ಕೇಬಲ್ ಆಪರೇಟರ್‌ಗಳು ಮೊರೆ ಇಟ್ಟಿದ್ದರು.
ಕೇಬಲ್ ಆಪರೇಟರ್‌ಗಳ ಕೋರಿಕೆಯನ್ನು ಟ್ರಾಯ್ ಮಾನ್ಯ ಮಾಡಿದ್ದು ಜನವರಿ 31 ರವರೆಗೆ ಸಮಯಾವಕಾಶ ಕಲ್ಪಿಸಿದೆ. ನೂತನ ಕೇಬಲ್ ಟೀವಿ ವ್ಯವಸ್ಥೆ ಜಾರಿಯಿಂದಾಗಿ ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.