ಉತ್ತರ ಪ್ರದೇಶ: ಚುಡಾಯಿಸಿದ್ದನ್ನು ವಿರೋಧಿಸಿದ್ದಕ್ಕೆ ಮಹಿಳೆಯ ಉಡುಪು ಕಳಚಿ ನಡುಬೀದಿಯಲ್ಲಿ ಥಳಿಸಿದರು!
ಚುಡಾಯಿಸಿದ್ದನ್ನು ವಿರೋಧಿಸಿದ ಮಹಿಳೆಯ ಉಡುಪು ಕಳಚಿ ಬೀದಿಯಲ್ಲಿ ಥಳಿಸಿರುವ ನೀಚ ಕೃತ್ಯ ಉತ್ತರ ಪ್ರದೇಶದ ಗೋಪಿ ಗಂಜ್ ನಲ್ಲಿ ನಡೆದಿದೆ.
ಗೋಪಿಗಂಜ್: ಚುಡಾಯಿಸಿದ್ದನ್ನು ವಿರೋಧಿಸಿದ ಮಹಿಳೆಯ ಉಡುಪು ಕಳಚಿ ಬೀದಿಯಲ್ಲಿ ಥಳಿಸಿರುವ ನೀಚ ಕೃತ್ಯ ಉತ್ತರ ಪ್ರದೇಶದ ಗೋಪಿ ಗಂಜ್ ನಲ್ಲಿ ನಡೆದಿದೆ.
ಲಾಲ್ ಚಂದ್ರ ಯಾದವ್ ಮೃಗೀಯ ವರ್ತನೆ ತೋರಿದ ವ್ಯಕ್ತಿಯಾಗಿದ್ದಾನೆ. ಚುಡಾಯಿಸಿದ್ದಕ್ಕಾಗಿ ತನ್ನನ್ನು ವಿರೋಧಿಸಿದ ಮಹಿಳೆಯ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಲಾಲ್ ಚಂದ್ ಯಾದವ್, ತನ್ನ ಸಹಚರರೊಂದಿಗೆ ಸೇರಿ ಮಹಿಳೆಯ ವಸ್ತ್ರವನ್ನು ಕಳಚಿದ್ದಲ್ಲದೇ ಆಕೆಯನ್ನು ನಡು ಬೀದಿಗೆ ಎಳೆದುತಂದು ಥಳಿಸಿದ್ದಾನೆ. ಮಹಿಳೆಯನ್ನು ರಕ್ಷಿಸುವ ಬದಲು ಗ್ರಾಮಸ್ಥರು ವಿಡಿಯೋ ಮಾಡಿಕೊಂಡಿದ್ದು ವಿಡಿಯೋ ವೈರಲ್ ಆಗತೊಡಗಿದೆ.
ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಪೈಕಿ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ, ಉಳಿದ ಕ್ರಿಮಿನಲ್ ಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಯಾದವೇಂದ್ರ ಯಾದವ್ ತಿಳಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.