ದೇಶ

ಕೇಂದ್ರ ಸರ್ಕಾರದ ಮುದ್ರಣ ಮಾಧ್ಯಮಕ್ಕೆ ಜಾಹಿರಾತು; 3 ವರ್ಷದಲ್ಲಿ ಖರ್ಚಾಗಿದ್ದು 1,857 ಕೋಟಿ!

Srinivas Rao BV
ಮುದ್ರಣ ಮಾಧ್ಯಮದ ವಿಭಾಗದಲ್ಲಿ ಜಾಹಿರಾತು ನೀಡುವುದಕ್ಕೆ ಕೇಂದ್ರ ಸರ್ಕಾರ ಕಳೆದ 3 ವರ್ಷಗಳಲ್ಲಿ ಬರೊಬ್ಬರಿ 1,857 ಕೋಟಿ ರೂಪಾಯಿ ಖರ್ಚು ಮಾಡಿದೆ. 
ಬ್ಯೂರೋ ಆಫ್ ಔಟ್ ರೀಚ್ ಹಾಗೂ ಕಮ್ಯುನಿಕೇಷನ್ ಅಥವಾ ಬಿಒಸಿ ವಿವಿಧ  ಸಚಿವಾಲಯ ಹಾಗೂ ಇಲಾಖೆಗಳ ಪರವಾಗಿ ಮುದ್ರಣ ಮಾಧ್ಯಮಗಳಿಗೆ ಒಟ್ಟಾರೆ 1,857 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಸರಣ ಇಲಾಖೆ ರಾಜ್ಯವರ್ಧನ್ ರಾಥೋಡ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. 
2015-16 ನೇ ಸಾಲಿನಲ್ಲಿ 20,111 ಆರ್ಡರ್ ಗಳು ಬಿಡುಗಡೆಯಾಗಿತ್ತು ಇದಕ್ಕಾಗಿ 579.88ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, 2016-17 ನೇ ಸಾಲಿನಲ್ಲಿ 21,576 ಆರ್ಡರ್ ಗಳಿಗೆ 628.04 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 
2017-18 ನೇ ಸಾಲಿನಲ್ಲಿ 11,798 ರಿಲೀಸ್ ಆರ್ಡರ್ ಗಳಿಗೆ 648.82 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 
SCROLL FOR NEXT