ದೇಶ

ಬಾಂಗ್ಲಾದೇಶ ಚುನಾವಣೆಯಲ್ಲಿ ಶೇಖ್ ಹಸೀನಾಗೆ ಗೆಲವು: ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

Manjula VN
ಡಾಕಾ: ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ನೇತೃತ್ವದ ಮಿತ್ರಪಕ್ಷಗಳ ಒಕ್ಕೂಟ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ್ದು, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದೆ. ಸತತ 4ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಶೇಖ್ ಹಸೀನಾ ಅವರು ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 
ಶೇಖ್ ಹಸೀನಾ ಅವರೊಂದಿಗೆ ಮಾತನಾಡಿರುವ ಕುರಿತು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 
ಬಾಂಗ್ಲಾದೇಶ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲವು ದಾಖಲಿಸಿರುವ ಶೇಖ್ ಹಸೀನಾ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದೇನೆ. ಈ ವೇಳೆ ಶುಭಾಶಯಗಳನ್ನು ಕೋರಿದ್ದೇನೆಂದು ಹೇಳಿದ್ದಾರೆ. 
ಜೊತೆಗೆ ಭಾರತದೊಂದಿದೆ ನಿಮ್ಮ ಉತ್ತಮ ಬಾಂಧವ್ಯ ಹೀಗೆಯೇ ಮುಂದುವರೆಯಲಿ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ. 
ಪ್ರತಿಪಕ್ಷಗಳನ್ನು ಮಣಿಸಿ ಸತತ ನಾಲ್ಕನೇ ಬಾರಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಬಾಂಗ್ಲಾದೇಶದ ಅಧಿಕಾರದ ಗದ್ದುಗೆಗೆ ಏರಿದೆ. 300 ಸದಸ್ಯ ಬಲದ ಸಂಸತ್ ನಲ್ಲಿ ಅವಾಮಿ ಲೀಗ್ ಹಾಗೂ ಅದರ ಮಿತ್ರ ಪಕ್ಷಗಳು ಬರೋಬ್ಬರಿ 267 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ದಿಗ್ವಿಜಯ ಸಾಧಿಸಿದೆ. ಪ್ರಮುಖ ಪ್ರತಿಪಕ್ಷವಾಗಿದ್ದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ (ಬಿಎನ್'ಪಿ) ಕೇವಲ 21 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. 
SCROLL FOR NEXT