ಪಶ್ಚಿಮ ಬಂಗಾಳ: ನಮನ್ನು ಬಿಟ್ಟು ಕಾಂಗ್ರೆಸ್ ದೆಹಲಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು, ಸಿಪಿಐಎಂ ಜೊತೆಗೆ ಕಾಂಗ್ರೆಸ್ ತಮ್ಮ ಸರ್ಕಾರವನ್ನು ಟೀಕಿಸುವಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಿಪಿಐ (ಎಂ) ಎರಡೂ ಒಂದೇ. ಇದು ಹೊಸ ವಿಚಾರವೇನಲ್ಲಾ. ಸಿಪಿಐ( ಎಂ) ಹೇಗೆ ಕಾಂಗ್ರೆಸ್ ಗೆ ಸಹಕಾರ ಕೊಡುತ್ತದೆ ಎಂಬುದನ್ನು ನಾನು ಬಲ್ಲೆ ಎಂದು ರಾಜ್ಯಪಾಲರ ಮೇಲಿನ ಭಾಷಣದ ವಂದನಾನಿರ್ಣಯದಲ್ಲಿ ಮಮತಾ ಬ್ಯಾನರ್ಜಿ ಹೇಳಿದರು.
ತೃಣಮೂಲ ಕಾಂಗ್ರೆಸ್ ದೂರ ಇಟ್ಟು ದೆಹಲಿ ಕಾಂಗ್ರೆಸ್ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ರಾಜಸ್ತಾನದಲ್ಲಿ ಕಾಂಗ್ರೆಸ್ ಜಯಗಳಿಸಿರುವುದಕ್ಕೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪಶ್ಟಿಮ ಬಂಗಾಳ ರಾಜ್ಯದ ಅಧಿವೇಶನ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಮಾತನಾಡಬೇಕಿದ್ದರೆ, ಸಿಪಿಐ(ಎಂ) ಸದಸ್ಯರೊಂದಿಗೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದರು.
ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಪ್ರತಿಪಕ್ಷದವರು ರಚನಾತ್ಮಕ ವಿಮರ್ಶೆ ಮಾಡಲಿ.ಎಲ್ಲಾ ರಾಜ್ಯಗಳಂತೆ ಪಶ್ಚಿಮ ಬಂಗಾಳ ಸರ್ಕಾರವೂ ಅಭಿವೃದ್ದಿಯೋಜನೆಗಳಿಗಾಗಿ ಶೇಕಡಾ 45 ರಷ್ಟು ಸಾಲ ಪಡೆದಿರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು.