ದೇಶ

ಅಮೆರಿಕ ವಾಯುಪಡೆ ಮುಖ್ಯಸ್ಥನಿಂದ ದೇಶಿ ನಿರ್ಮಿತ ತೇಜಸ್ ವಿಮಾನ ಚಾಲನೆ!

Srinivas Rao BV
ಜೋಧ್ ಪುರ: ಅಮೆರಿಕ ವಾಯುಪಡೆ ಮುಖ್ಯಸ್ಥ ಜನರಲ್ ಡೇವಿಡ್ ಎಲ್ ಗೋಲ್ಡ್ಫಿನ್ ಫೆ.03 ರಂದು ದೇಶಿ ನಿರ್ಮಿತ ತೇಜಸ್ ವಿಮಾನ  ಚಾಲನೆ ಮಾಡಿದ್ದಾರೆ. 
ಜೋಧ್ ಪುರದಲ್ಲಿರುವ ವಾಯು ಪಡೆ ನಿಲ್ದಾಣದಿಂದ ತೇಜಸ್ ವಿಮಾನ ಚಾಲನೆ ಮಾಡಿದ್ದಾರೆ, ಫೆ.2 ರಂದು ಭಾರತಕ್ಕೆ ಭೇಟಿ ನೀಡಿರುವ ಡೇವಿಡ್ ಅವರೊಂದಿಗೆ ಏರ್ ವೈಸ್ ಮಾರ್ಷಲ್ ಎಪಿ ಸಿಂಗ್ ಸಹ ತೇಜಸ್ ವಿಮಾನದಲ್ಲಿದ್ದರು. ಡೇವಿಡ್ ತೇಜಸ್ ವಿಮಾನ ಚಾಲನೆ ಮಾಡಿರುವುದನ್ನು ಐಎಎಫ್ ಟ್ವೀಟ್ ಮಾಡಿದೆ. 
ವಾಯುಪಡೆಗೆ ಸಂಬಂಧಿಸಿದಂತೆ ಭಾರತ ಹಾಗೂ ಅಮೆರಿಕದ ನಡುವಿನ ಪರಸ್ಪರ ಸಹಕಾರ ಮತ್ತಷ್ಟು ಹೆಚ್ಚುಗೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
SCROLL FOR NEXT