ಪುಣೆ: ಪುಣೆಯ ಲೋನವಾಲ ನಗರದಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ದಾರುಣ ಘಟಣೆ ವರದಿಯಾಗಿದೆ.
ವೇಗವಾಗಿ ಬರುತ್ತಿದ್ದ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಪೂಜಾ ಗಾಯಕ್ವಾಡ್(23), ಪಿತಲ ಸಗಾಡ್ಡ(21), ಸವಿತಾ ರೈ(26), ಸೋವಿತ್ ರೈ(21) ಮತ್ತು ಮೊಹಮ್ಮದ್(30) ಎಂದು ಗುರುತಿಸಲಾಗಿದೆ.