ದೇಶ

100 ದೇಶಗಳಲ್ಲಿ ಡಿಡಿನ್ಯೂಸ್ ಪ್ರಸಾರ ವಿಸ್ತರಿಸಲು ಚಿಂತನೆ

Nagaraja AB

ನವದೆಹಲಿ:  ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರದಿಂದ ಜನಪ್ರಿಯವಾಗಿರುವ ಡಿಡಿನ್ಯೂಸ್  ಅನ್ನು 100 ದೇಶಗಳಿಗೆ ವಿಸ್ತರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಸಾಗರೋತ್ತರ ದೇಶಗಳಲ್ಲಿ ಪ್ರಮುಖ ಸಂಸ್ಕೃತಿ ಮತ್ತು ಮನೋರಂಜನಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಸುದ್ದಿ ಹಾಗೂ ಪ್ರಸ್ತುತ ವಿದ್ಯಮಾನಗಳ ಕಾರ್ಯಕ್ರಮಗಳು  ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಚೀನಾ ಮತ್ತು ಯುನೈಟೈಡ್ ಅರಬ್ ದೇಶಗಳಲ್ಲಿ ಮಾತ್ರ  ಪ್ರಸಾರವಾಗುತ್ತಿವೆ. ಇದರ ಸಂಖ್ಯೆಯನ್ನು ಇತರ 100 ರಾಷ್ಟ್ರಗಳಿಗೂ ವಿಸ್ತರಿಸಲು ಸಚಿವಾಲಯ ಚಿಂತನೆ ನಡೆಸಿದೆ ಎಂದು ಅವರು ಹೇಳಿದ್ದಾರೆ.

ವಿದೇಶಿ ರಾಷ್ಟ್ರಗಳಲ್ಲಿ ಕೇಬಲ್ ವೆಚ್ಚ ಮತ್ತಿತರ ಹಣಕಾಸಿನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಪ್ರಸಾರ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ವಿದೇಶಿ  ನೇರ ಹೂಡಿಕೆ ಹರಿವು ಹಾಗೂ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT