ದೇಶ

ಪಾಕಿಸ್ತಾನ ಯುದ್ಧ ಘೋಷಿಸಿದೆ, ನಮ್ಮ ಕ್ಷಿಪಣಿಗಳು ರಾಜ್ ಪಥ್ ಪ್ರದರ್ಶನಕ್ಕಷ್ಟೇ ಸೀಮಿತವೇ?: ಶಿವಸೇನೆ

Srinivas Rao BV
ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಶಿವಸೇನೆ, ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಭಾರತ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 
ಪಾಕಿಸ್ತಾನದಿಂದ ನಡೆಯುತ್ತಿರುವ ದಾಳಿಗಳ ಬಗ್ಗೆ ಪ್ರಸ್ತಾಪಿಸಿರುವ ಶಿವಸೇನೆಯ ನಾಯಕ ಸಂಜಯ್ ರಾವುತ್, ಪಾಕಿಸ್ತಾನ ಗಡಿಯಲ್ಲಿ ನಮ್ಮ ಯೋಧರ ಮೇಲೆ ದಾಳಿ ನಡೆಸಿದೆ, ನಮ್ಮ ಕ್ಷಿಪಣಿಗಳಿರುವುದು ಕೇವಲ ರಾಜ್ ಪಥ್ ನಲ್ಲಿ ಪ್ರದರ್ಶನಕ್ಕಿಡುವುದಕ್ಕಾಗಿಯೇ ಎಂದು ಪ್ರಶ್ನಿಸಿದ್ದಾರೆ. 
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಬೇಕೆಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದು, ಪಾಕಿಸ್ತಾನ ನೇರವಾಗಿ ನಮ್ಮ ಮೇಲೆ ಯುದ್ಧ ಘೋಷಿಸಿದೆ, ಪಾಕಿಸ್ತಾನಕ್ಕೆ ಅದರದ್ದೇ ಆದ ಭಾಷೆಯಲ್ಲಿ ಉತ್ತರ ನೀಡಬೇಕು ಎಂದು ಸಂಜಯ್ ರಾವುತ್ ಹೇಳಿದ್ದಾರೆ. 
SCROLL FOR NEXT