ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಶ್ಮೀರಕ್ಕಾಗಿ ನನ್ನ ಹೋರಾಟ ನಿಲ್ಲಲ್ಲ, ನಿಮ್ಮಿಂದ ಸಾಧ್ಯವಾದರೆ ನನ್ನನ್ನು ಬಂಧಿಸಿ: ಪಾಕ್'ಗೆ ಹಫೀಜ್ ಸಯೀದ್

ಕಾಶ್ಮೀರಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ, ನಿಮ್ಮಿಂದ ಸಾಧ್ಯವಾದರೆ ನನ್ನನ್ನು ಬಂಧನಕ್ಕೊಳಪಡಿಸಿ ಎಂದು ಮುಂಬೈ ಭಯೋತ್ಪಾದನಾ ದಾಳಿಯ ರುವಾರಿ ಹಾಗೂ ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನಕ್ಕೆ ಸವಾಲೆಸಿದಿದ್ದಾನೆ...

ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್
Manjula VN
Updated On : 6 Feb 2018, 10:35 am
ಲಾಹೋರ್: ಕಾಶ್ಮೀರಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ, ನಿಮ್ಮಿಂದ ಸಾಧ್ಯವಾದರೆ ನನ್ನನ್ನು ಬಂಧನಕ್ಕೊಳಪಡಿಸಿ ಎಂದು ಮುಂಬೈ ಭಯೋತ್ಪಾದನಾ ದಾಳಿಯ ರುವಾರಿ ಹಾಗೂ ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನಕ್ಕೆ ಸವಾಲೆಸಿದಿದ್ದಾನೆ. 
ಲಾಹೋರ್'ನಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಮಾತನಾಡಿರುವ ಸಯೀದ್, ಪಾಕಿಸ್ತಾನ ಸರ್ಕಾರ ನನ್ನನ್ನು ಬಂಧಿಸಬೇಕೆಂದು ಬಯಸಿದರೆ, ಬಂಧಿಸಲಿ. ಆದರೆ, 2018ನ್ನು ಕಾಶ್ಮೀರಿಗರಿಗೆ ಅರ್ಪಿಸುವ ಪ್ರಯತ್ನವನ್ನು ಮಾತ್ರ ನಾನು ನಿಲ್ಲಿಸುವುದಿಲ್ಲ. ನಮ್ಮ ಮೇಲೆ ಹೆಚ್ಚು ಒತ್ತಡ ಹೇರಿದಷ್ಟೂ ನಾವು ಮತ್ತಷ್ತು ಗಟ್ಟಿಗೊಳ್ಳುತ್ತೇವೆ ಎಂದು ಹೇಳಿದ್ದಾನೆ. 
ಇದೇ ವೇಳೆ ಕಾಶ್ಮೀರ ವಿಚಾರದಲ್ಲಿ ಯಾವುದೇ ಪಾತ್ರವನ್ನು ವಹಿಸದ  ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ವಿರುದ್ದ ಕಿಡಿಕಾರಿರುವ ಹಫೀಜ್, ಕಾಶ್ಮೀರ ಸ್ವತಂತ್ರಕ್ಕಾಗಿ ಕೆಲಸವನ್ನು ಮಾಡಿದ್ದರೆ, ನವಾಜ್ ಷರೀಫ್ ಅವರು ಮತ್ತೆ ಪ್ರಧಾನಮಂತ್ರಿಗಳಾಗುವಂತೆ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೆವು ಎಂದು ತಿಳಿಸಿದ್ದಾನೆ. 

Advertisement

Advertisement

ಅಮೆರಿಕಾ ಹಾಗೂ ಭಾರತ ದೇಶಗಳ ಒತ್ತಡದಿಂದಾಗಿ ನಮ್ಮ ಸುದ್ದಿ ಮಾಧ್ಯಮಗಳ ವರದಿಗಳು ಪಾಕಿಸ್ತಾನದಲ್ಲಿ ನಿಷೇಧಗೊಂಡಿವೆ ಎಂದಿದ್ದಾನೆ. 
ನಮ್ಮ ಸಾಮಾಜಿಕ ಕೆಲಸಗಳನ್ನು ನೋಡಲು ಜೆಯುಡಿ ಹಾಗೂ ಎಫ್ಐಎಫ್ ಕೇಂದ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧಿಕಾರಿಗಳು ತಂಡ ಭೇಟಿ ನೀಡಲು ಸರ್ಕಾರ ಅನುಮತಿ ನೀಡಬೇಕಿದೆ. ಅಂತರಾಷ್ಟ್ರೀಯ ಅಧಿಕಾರಿಗಳನ್ನು ನಮ್ಮ ಕೇಂದ್ರಗಳು ಸ್ವಾಗತಿಸುತ್ತವೆ ಎಂದು ಹೇಳಿದ್ದಾನೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement