ರೇಣುಕಾ ಚೌಧರಿ- ನರೇಂದ್ರ ಮೋದಿ
ನವದೆಹಲಿ: ವಿಧಾನಮಂಡಲ ಅಥವಾ ಸಂಸತ್ ಕಲಾಪಗಳಲ್ಲಿ ಸದನದಲ್ಲಿ ಗಂಭೀರ ಚರ್ಚೆಗಳಾಗುವಾಗ ಅನೇಕ ವಿನೋದ, ಗಮನ ಸೆಳೆಯುವಂತಹ ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ, ಅಂಥಹದ್ದೇ ಘಟನೆ ಫೆ.07 ರ ಸಂಸತ್ ಅಧಿವೇಶನದ ರಾಜ್ಯಸಭಾ ಕಲಾಪದಲ್ಲಿ ನಡೆದಿದೆ.
ರಾಜ್ಯಸಭೆಯಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇಳೆ ಆಧಾರ್ ಯೋಜನೆ ಬಗ್ಗೆ ಮಾತನಾಡುತ್ತಾ, ಆಧಾರ್ ಯೋಜನೆ ರೀತಿಯ ಯೋಜನೆಯ ಪರಿಕಲ್ಪನೆಯನ್ನು 1998 ರಲ್ಲೇ ಎಲ್ ಕೆ ಅಡ್ವಾಣಿ ನೀಡಿದ್ದರು ಎಂಬ ಗಮನಾರ್ಹ ಅಂಶವನ್ನು ಪ್ರಸ್ತಾಪಿಸಿದ್ದರು, ಸದನ ಪ್ರಧಾನಿ ಪ್ರಸ್ತಾಪಿಸಿದ ಗಂಭೀರ ವಿಷಯವನ್ನು ಆಲಿಸುತ್ತಿತ್ತಾದರೂ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಮೋದಿ ಮಾತು ಕೇಳಿ ಏಕಾ ಏಕಿ ಗಹಗಹಿಸಿ ವ್ಯಂಗ್ಯವಾಗಿ ನಗಲು ಪ್ರಾರಂಭಿಸಿದರು, ಈ ವೇಳೆ ಪ್ರಧಾನಿ ಭಾಷಣಕ್ಕೆ ಅಡ್ದಿ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರೇಣುಕಾ ಚೌಧರಿ ನಡೆದುಕೊಂಡ ರೀತಿಗೆ ಸಿಡಿಮಿಡಿಗೊಂಡು ಅಸಮಾಧಾನ ವ್ಯಕ್ತಪಡಿಸಿದರು, ಅಷ್ಟೇ ಅಲ್ಲದೇ ನಿಮ್ಮಲ್ಲಿ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಎಂದು ರೇಣುಕಾ ಚೌಧರಿ ಅವರಿಗೆ ಹೇಳಿದರು ಈ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಮಾನ್ಯ ಸಭಾಪತಿಗಳೇ ರೇಣುಕಾ ಚೌಧರಿ ಅವರಿಗೆ ಏನೂ ಹೇಳಬೇಡಿ, ನನಗೆ ರಾಮಾಯಣ ಧಾರಾವಾಹಿಯ ನಂತರ ಬಹಳ ವರ್ಷಗಳಾದ ನಂತರ ಈ ರೀತಿಯ ನಗು ಕೇಳಿಸಿಕೊಳ್ಳುವ ಅವಕಾಶ ಸಿಕ್ಕಿದೆ ಎಂದು ವ್ಯಂಗ್ಯ ಧಾಟಿಯಲ್ಲೇ ಪ್ರತಿಕ್ರಿಯೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos