ಶ್ರೀನಗರ: ಜೆಕೆಎಲ್ಎಫ್ ಸಂಸ್ಥಾಪಕ ಮಖ್ಬೂಲ್ ಭಟ್ 34ನೇ ಸಾವಿನ ವರ್ಷಾಚರಣೆ ಹಿನ್ನಲೆ ಪ್ರತಿಭಟನೆಗೆ ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಹಲವೆಡೆ ಭಾನುವಾರ ನಿರ್ಬಂಧ ಹೇರಲಾಗಿದೆ.
ಮಖ್ಬೂಲ್ ಭಟ್'ನನ್ನು 1984 ರಲ್ಲಿ ರಾಜಧಾನಿ ನವದೆಹಲಿಯ ತಿಹಾರ್ ಜೈಲಿನಲ್ಲಿ ಫೆ.11 ರಂದು ಗಲ್ಲಿಗೇರಿಸಲಾಗಿತ್ತು. ಭಟ್ ಕುಪ್ವಾರದ ಟ್ರೆಹ್ಗಾಮ್ ಗ್ರಾಮದವನಾಗಿದ್ದ.
ಇದರಂತೆ ಮಖ್ಬೂಲ್ ಸಾವನ್ನಪ್ಪಿ ಇಂದಿಗೆ 34 ವರ್ಷಗಳು ಕಳೆದಿದ್ದು, ಈ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಶ್ರೀನಗರ ಸೇರಿದಂತೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆ ಮತ್ತು ಸೊಪೋರ್ ಟೌನ್ ನಲ್ಲಿ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಹಿರಿಯ ಪ್ರತ್ಯೇಕತಾವಾದಿ ನಾಯಕರಾದ ಸಯ್ಯದ್ ಅಲಿ ಗಿಲಾನಿ, ಮಿರ್ವೈಜ್ ಉಮರ್ ಫರೂಖ್ ಮತ್ತು ಮುಹಮ್ಮದ್ ಯಾಸಿನ ಮಲಿಕ್ ಪ್ರತಿಭಟನೆಯಲ್ಲಿ ಭಾಗಿಯಾದಂತೆ ನೋಡಿಕೊಳ್ಳುವ ಸಲುವಾಗಿ ಗೃಹ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆ ಕರೆ ಹಿನ್ನಲೆಯಲ್ಲಿ ಶ್ರೀನಗರ ಸೇರಿದಂತೆ ಹಲವೆಡೆ ಸಾರಿಗೆ ವ್ಯವಸ್ಥೆ ಬಂದ್ ಆಗಿದೆ. ನಿರ್ಬಂಧ ಹೇರಿರುವ ಪ್ರದೇಶಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸಿಆರ್'ಪಿಎಫ್ ಪಡೆಗಳು ಭದ್ರತೆಗಳನ್ನು ನೀಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics