ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

ಯುದ್ಧಕ್ಕೆ ಸಿದ್ಧಗೊಳ್ಳಲು ಸೇನೆಗೆ ತಿಂಗಳು ಬೇಕು, ಆರ್'ಎಸ್ಎಸ್'ಗೆ 3 ದಿನ ಸಾಕು: ಮೋಹನ್ ಭಾಗವತ್

ಯುದ್ಧಕ್ಕೆ ಸಿದ್ದಗೊಳ್ಳಲು ಸೇನೆಗೆ ತಿಂಗಳುಗಳ ಕಾಲ ಬೇಕಾದರೆ, ಆರ್'ಎಸ್ಎಸ್'ಗೆ ಮೂರೇ ದಿನ ಸಾಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ...

ಲಖನೌ: ಯುದ್ಧಕ್ಕೆ ಸಿದ್ದಗೊಳ್ಳಲು ಸೇನೆಗೆ ತಿಂಗಳುಗಳ ಕಾಲ ಬೇಕಾದರೆ, ಆರ್'ಎಸ್ಎಸ್'ಗೆ ಮೂರೇ ದಿನ ಸಾಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ. 
ಲಖನೌನಲ್ಲಿ ಆರ್'ಎಸ್ಎಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿರುವ ಅವರು, ಯಾವುದೇ ಕಾರ್ಯಾಚರಣೆ ನಡೆಸಬೇಕೆಂದರೂ ಭಾರತೀಯ ಸೇನೆ 6-7 ತಿಂಗಳು ಕಾಲ ತೆಗೆದುಕೊಳ್ಳುತ್ತದೆ. ಆದರೆ, ನಮ್ಮ ಸಂಘ ಮೂರು ದಿನಗಳಲ್ಲಿ ಇಂತಹ ಯೋಜನೆ ರೂಪಿಸುವ ಸಾಮರ್ಥ್ಯವನ್ನು ನೀಡಿದೆ ಎಂದು ಹೇಳಿದ್ದಾರೆ. 
ಅಗತ್ಯ ಬಿದ್ದರೆ, ದೇಶದ ರಕ್ಷಣೆಗಾಗಿ ಕೇವಲ ಮೂರು ದಿನಗಳಲ್ಲಿ ಕಾರ್ಯಕರ್ತರನ್ನು ಸೇನೆಯಂತೆ ಸಜ್ಜುಗೊಳಿಸುವ ಸಾಮರ್ಥ್ಯ ಆರ್'ಎಸ್ಎಸ್'ಗೆ ಇದೆ. ಸಂವಿಧಾನ ಅವಕಾಶ ನೀಡಿದರೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಹ ಸ್ವಯಂ ಸೇವಕರು ಸಜ್ಜಾಗಿದ್ದಾರೆಂದು ತಿಳಿಸಿದ್ದಾರೆ. 
ಸಂಘವು ಮಿಲಿಟರಿ ಅಥವಾ ಪ್ಯಾರಾ ಮಿಲಿಟರಿ ಅಲ್ಲ. ಆದರೆ, ಕೌಟುಂಬಿಕ ಸಂಘಟನೆಯಾಗಿದ್ದು, ದೇಶಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡುವ ಸೇನೆಯಂತೆಯೇ ಶಿಸ್ತು ಪಾಲನೆ ಮಾಡಿಕೊಂಡು ಬಂದಿದ್ದೇವೆ ಎಂದಿದ್ದಾರೆ. 
ಆದರೆ, ಆರ್'ಎಸ್ಎಸ್ ಸಾಮರ್ಥ್ಯ ಸೇನೆಗಿಂತ ಮೇಲು ಎಂಬ ಭಾಗವತ್ ಅವರ ಹೇಳಿಕೆಗೆ ಆನ್ ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಇಂತಹದ್ದೊಂದು ಹೇಳಿಕೆ ಮೂಲಕ ಆರ್'ಎಸ್ಎಸ್ ಮುಖ್ಯಸ್ಥ ಭಾಗವತ್ ಅವರು ಸೇನೆಯನ್ನು ಅಪಮಾನ ಮಾಡಿದ್ದಾರೆಂಬ ಟೀಕೆಗಳು ಕೇಳಿಬರತೊಡಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ