ದೇಶ

ಮಹಾಮೈತ್ರಿ ಉಳಿಯುವುದಿಲ್ಲ ಎಂದು ಮೊದಲೇ ತಿಳಿದಿತ್ತು: ಬಿಹಾರ ಸಿಎಂ ನಿತೀಶ್ ಕುಮಾರ್

Srinivasamurthy VN
ಪಾಟ್ನಾ: ಕಾಂಗ್ರೆಸ್, ಜೆಡಿಯು ಮತ್ತು ಆರ್ ಜೆಡಿ ಪಕ್ಷಗಳನ್ನೊಳಗೊಂಡ ಮಹಾ ಮೈತ್ರಿ (ಮಹಾಘಟ್ ಬಂಧನ್) ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಮೊದಲೇ ತಿಳಿದಿತ್ತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಸೋಮವಾರ ಪಾಟ್ನಾದಲ್ಲಿ ಜನತಾ ದರ್ಶನ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ನಿತೀಶ್ ಕುಮಾರ್ ಅವರು, ಮಹಾಮೈತ್ರಿ ರಚನೆಯಾದ ದಿನವೇ ಈ ಮೈತ್ರಿಕೂಟ ಹೆಚ್ಚು ದಿನ ಬಾಳುವುದಿಲ್ಲ, ಹೆಚ್ಚು  ಎಂದರೆ ಒಂದು ಅಥವಾ 2 ವರ್ಷ ಇರಬಹುದು ಎಂದು ಮೊದಲೇ ಊಹಿಸಿದ್ದೆ. ಅದಾಗ್ಯೂ ಸುಮಾರು 20 ತಿಂಗಳ ಕಾಲ ಮೈತ್ರಿ ಮುಂದುವರೆಸಿದ್ದೆ ಎಂದು ಹೇಳಿದ್ದಾರೆ.
ಇದೇ ವೇಳೆ ನಿತೀಶ್ ಕುಮಾರ್ ಮೋಸ ಮಾಡಿದ್ದಾರೆ ಎಂಬ ಆರ್ ಜೆಡಿ ಆರೋಪವನ್ನು ತಳ್ಳಿ ಹಾಕಿದ ನಿತೀಶ್ ಭ್ರಷ್ಟಾಚಾರ ಸಹಿಸಿಕೊಂಡು ಆಡಳಿತ ನಡೆಸಬೇಕಾದ ಅನಿವಾರ್ಯತೆ ನನಗಿಲ್ಲ ಎಂದು ತಿರುಗೇಟು ನೀಡಿದರು.
ಇನ್ನು ನಿತೀಶ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರು, ನಿತೀಶ್ ಕುಮಾರ್ ಅವರಿಗೆ ಮಹಾ ಮೈತ್ರಿ ಹೆಚ್ಚುಕಾಲ ಉಳಿಯುವುದಿಲ್ಲ ಎಂದು ತಿಳಿದಿದ್ದರೆ ಅವರೇ ಕೆ ಕೈ ಜೋಡಿಸಿ ಸಿಎಂ  ಆದರು ಎಂದು ಪ್ರಶ್ನಿಸಿದ್ದಾರೆ. ನಿತೀಶ್ ಕುಮಾರ್ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಪರಿಸ್ಥಿತಿಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಶರದ್ ಯಾದವ್ ಕಿಡಿಕಾರಿದ್ದಾರೆ.
SCROLL FOR NEXT