ಮುಂಬೈ: ಸಾಹಿತಿ ಯಶವಂತ ಚಿತ್ತಾಲರ ಪತ್ನಿ ಮಾಲತಿ ಚಿತ್ತಾಲ ನಿಧನ
ಕನ್ನಡದ ಹಸರಾಂತ ಸಾಹಿತಿ ಯಶವಂತ ಚಿತ್ತಾಲರ ಪತ್ನಿ ಮಾಲತಿ ಚಿತ್ತಾಲ (84) ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.
ಮುಂಬೈ: ಕನ್ನಡದ ಹೆಸರಾಂತ ಸಾಹಿತಿ ಯಶವಂತ ಚಿತ್ತಾಲರ ಪತ್ನಿ ಮಾಲತಿ ಚಿತ್ತಾಲ (84) ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.
ದೂರದ ಮುಂಬೈನಲ್ಲಿದ್ದುಕೊಂಡೇ 'ಶಿಕಾರಿ', 'ಪುರುಷೋತ್ತಮ', 'ಛೇದ' ಗಳಂತಹಾ ಕಾದಂಬರಿಗಳು, ಇನ್ನೂ ಅನೇಕ ಮೌಲ್ಯಯುತ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ್ದ ಯಶವಂತ ಚಿತ್ತಾಲರಿಗೆ ಅವರ ಪತ್ನಿ ಸದಾ ಬೆನ್ನೆಲುಬಾಗಿದ್ದರು.
ಕಾರವಾರದ ಬಾಡ ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ ಯಾಸವಂತ ಚಿತ್ತಾಲರು ತನ್ನ ವಿದ್ಯಾರ್ಥಿ ಮಾಲತಿಯನ್ನು ಪ್ರೀತಿಸಿ ವಿವಾಹವಾಗಿದ್ದರು.
ಕೇಂದ್ರ ವೃತ್ತಾಂತದ ಚಿತ್ತಾಲರು 2014ರ ಮಾರ್ಚ್ 22ರಂದು ಅಸುನೀಗಿದ್ದರು. ಇದಾದ ನಂತರದಲ್ಲಿ ಮಾಲತಿ ಮುಂಬೈನಲ್ಲಿದ್ದ ತಮ್ಮ ನಿವಾಸದಲ್ಲಿ ಮಗ ಡಾ.ರವೀಂದ್ರ ಚಿತ್ತಾಲರೊಡನೆ ವಾಸವಿದ್ದರು.
ಜಯಂತ ಕಾಯ್ಕಿಣಿ ಸಂತಾಪ
ಮಾಲತಿ ಚಿತ್ತಾಲರ ನಿಧನಕ್ಕೆ ಕನ್ನಡದ ಖ್ಯಾತ ಕಥೆಗಾರ, ಸಾಹಿತಿ ಜಯಂತ ಕಾಯ್ಕಿಣಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮನೆಗೆ ಬಂದ ಕನ್ನಡದವರನ್ನು, ಅತಿಥಿಗಳನ್ನು ಮಾಲತಿ ಅವರು ಪ್ರೀತಿಯಿಂದ ಕಾಣುತ್ತಿದ್ದರಂದು ಅವರು ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.