ನವದೆಹಲಿ: ವೀಸಾದಲ್ಲಿ ಸರಳೀಕರಣ, ಹೆಚ್ಚಿನ ತೆರಿಗೆ ತಡೆಗಟ್ಟುವುದು ಸೇರಿದಂತೆ ಒಂಬತ್ತು ಒಪ್ಪಂದಗಳಿಗೆ ಇರಾನ್ ಹಾಗೂ ಭಾರತ ಸಹಿ ಹಾಕಿವೆ.
ಇರಾನ್ ಅಧ್ಯಕ್ಷ ಹಸನ್ ರೌಹಾನಿಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ನರೇಂದ್ರಮೋದಿ, ನೆರೆಯ ಅಪ್ಘಾನಿಸ್ತಾನವನ್ನು ಉಗ್ರರಿಂದ ರಕ್ಷಿಸಿ ಸುರಕ್ಷಿತವಾಗಿಡುವುದು ಇರಾನ್ ಹಾಗೂ ಭಾರತದ ಉದ್ದೇಶವಾಗಿದೆ ಎಂದರು.
ಅಪ್ಘಾನಿಸ್ತಾನವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸುವುದು ಉಭಯ ರಾಷ್ಟ್ರಗಳ ಧ್ಯೇಯವಾಗಿದೆ ಎಂದರು.
ಭಾರತ ಸರ್ಕಾರಕ್ಕೆ ಧನ್ಯವಾದ ಆರ್ಪಿಸಿದ ರೌಹಾನಿ, ಆರ್ಥಿಕತೆ ಮತ್ತು ಸಾಗಣೆ ಸಂಬಂಧ ಉಭಯ ರಾಷ್ಟ್ರಗಳು ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಉಭಯ ರಾಷ್ಟ್ರಗಳ ನಡುವಿನ ರೈಲ್ವೆ ಸಂಪರ್ಕ ಅಭಿವೃದ್ಧಿ ಹಾಗೂ ಚಾಬಹರ್ ಬಂದರು ಅಭಿವೃದ್ಧಿ ಸಂಬಂಧ ಮಾತುಕತೆ ನಡೆಸಿರುವುದಾಗಿ ರೌಹಾನಿ ಹೇಳಿದರು.