ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಇರಾನ್ ನ ಅಧ್ಯಕ್ಷ ಹಸನ್ ರೌಹಾನಿ ಬೆಂಬಲಿಸಿದ್ದಾರೆ.
1.3 ಬಿಲಿಯನ್ ಜನಸಂಖ್ಯೆಯಿರುವ ಭಾರತವೇಕೆ ವಿಶ್ವದ ಬಲಿಷ್ಠ ಮಂಡಳಿಯಲ್ಲಿ ಇರಬಾರದು, ಭಾರತಕ್ಕೇಕೆ ವಿಟೋ ಅಧಿಕಾರವಿಲ್ಲ? ಎಂದು ಪ್ರಶ್ನಿಸಿದ್ದು ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವ ಸುಳಿವು ನೀಡಿದ್ದಾರೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಸನ್ ರೌಹಾನಿ, ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಮಾಡಿಕೊಳ್ಳಲಾಗಿರುವ ಪರಮಾಣು ಒಪ್ಪಂದಕ್ಕೆ ನಮ್ಮ ರಾಷ್ಟ್ರ ಕೊನೆಯ ಉಸಿರಿರುವವರೆಗೂ ಬದ್ಧವಾಗಿರುತ್ತದೆ. ಆದರೆ ಒಪ್ಪಂದ ಮಾಡಿಕೊಂಡ ನಂತರವೂ ಸಮಾಲೋಚನೆ ನಡೆಸಬೇಕೆನ್ನುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವು ಸರಿಯಲ್ಲ ಎಂದು ರೌಹಾನಿ ಹೇಳಿದ್ದಾರೆ.