ದೇಶ

ಕಳೆದ ಒಂದು ವರ್ಷದಲ್ಲಿ 900 ಹೊಸ ವಿಮಾನಗಳಿಗಾಗಿ ಬೇಡಿಕೆ: ಪ್ರಧಾನಿ ಮೋದಿ

Srinivas Rao BV
ಮುಂಬೈ: ದೇಶದ ವಿಮಾನಯಾನ ವಲಯ ಅದ್ಭುತವಾದ ಬೆಳವಣಿಗೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಮಾನಯಾನ ಕ್ಷೇತ್ರ ಅದ್ಭುತವಾದ ಬೆಳವಣಿಗೆ ಕಾಣುತ್ತಿದ್ದು, ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಕ್ಕೆ ಈ ಬೆಳವಣಿಗೆ ಮುಖ್ಯವಾಗಿರಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 
"ವಿಮಾನಯಾನ ಕ್ಷೇತ್ರ ಬೆಳವಣಿಗೆಯಾದರೆ ದೇಶದ ಪ್ರವಾಸೋದ್ಯಮ ಕ್ಷೇತ್ರವೂ ಬೆಳವಣಿಗೆಯಾಗಲಿದ್ದು, ಉದ್ಯೋಗಾವಕಾಶಗಳೂ ಹೆಚುತ್ತವೆ. ವಿಮಾನಗಳ ಸಂಖ್ಯೆಯನ್ನು ಭಾರತ ಸರ್ಕಾರವೂ ಹೆಚ್ಚಿಸಿದೆ. ಖಾಸಗಿ, ಸರ್ಕಾರಿ ಸ್ವಾಮ್ಯದ ಒಟ್ಟು 450 ವಿಮಾನಗಳು  ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಲ್ಲೇ 900 ಹೊಸ ವಿಮಾನಗಳಿಗಾಗಿ ಬೇಡಿಕೆ ಬಂದಿದೆ ಎಂದು ಮೋದಿ ಹೇಳಿದ್ದಾರೆ. 
SCROLL FOR NEXT