ಸಾಂದರ್ಬಿಕ ಚಿತ್ರ 
ದೇಶ

ನಾಗ್ಪುರ: ಪತ್ರಕರ್ತನ ತಾಯಿ, ಮಗಳ ಬರ್ಬರ ಹತ್ಯೆ

ನಾಗ್ಪುರ ಮೂಲದ ಪತ್ರಕರ್ತ ಕವಿಕಾಂತ್ ಕಾಂಬ್ಳೆಯವರ ತಾಯಿ ಹಾಗೂ ಪುತ್ರಿಯನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ...

ಮುಂಬೈ; ನಾಗ್ಪುರ ಮೂಲದ ಪತ್ರಕರ್ತ ಕವಿಕಾಂತ್ ಕಾಂಬ್ಳೆಯವರ ತಾಯಿ ಹಾಗೂ ಪುತ್ರಿಯನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ. 
ಪತ್ರಕರ್ತೆ ರವಿಕಾಂತ್ ಕಾಂಬ್ಳೆಯವರ ತಾಯಿ ಉಷಾ ಕಾಂಬ್ಳೆ (52) ಮತ್ತು ರಾಶಿ (18) ಹತ್ಯೆಯಾದ ದುರ್ದೈವಿಗಳಾಗಿದ್ದಾರೆ. 
ಉಷಾ ಹಾಗೂ ರಾಶಿಯವರ ಮೃತದೇಹಳು ನಾಗ್ಪುರಪದ ಸೀತಾಬುಲ್ದಿ ಪ್ರದೇಶದಲ್ಲಿ ದೊರಕಿದ್ದು, ದುಷ್ಕರ್ಮಿಗಳು ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ. 
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಉಷಾ ಅವರು ಮೊಮ್ಮಗಳು ರಾಶಿಯವರನ್ನು ಕರೆದುಕೊಂಡು ಆಭರಣ ಮಳಿಗೆಗೆ ಹೋಗಿದ್ದಾರೆ. ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಇದರಿಂದ ಅನುಮಾನಗೊಂಡ ಉಷಾ ಅವರ ಪತಿ ಉಷಾ ಅವರ ಮೊಬೈಲ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಫೋನ್ ಸ್ವಿಚ್ ಆಫ್ ಬಂದಿದೆ. ತೀವ್ರ ಹುಡುಕಾಟ ನಡೆಸಿದ ಬಳಿಕ ರವಿಕಾಂತ್ ಅವರು ರಾತ್ರಿ 10ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಆರಂಭಿಸಿದಾಗ ಇಬ್ಬರ ಮೃತದೇಹಗಳು ನಾಗ್ಬುರದ ಸೀತಾಬುಲ್ದಿ ಎಂಬ ಪ್ರದೇಶದಲ್ಲಿ ದೊರಕಿದೆ. 
ಮೃತಪಟ್ಟಿರುವ ಉಷಾ ಹಾಗೂ ರಾಶಿ ಇಬ್ಬರು ಆಭರಣ ಮಳಿಗೆಗೆ ಹೋಗಿದ್ದಾರೆ. ಇದಾದ ಬಳಿಕ ದಿನಸಿ ಅಂಗಡಿಗೆ ತೆರಳಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ತಂಡ ಇಬ್ಬರನ್ನು ಅಪಹರಣ ಮಾಡಿದ್ದಾರೆ. ಪ್ರಕರಣ ಸಂಬಧ ಇದೀಗ ದಿನಸಿ ಅಂಗಡಿಯ ವ್ಯಕ್ತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಈ ನಡುವೆ ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಮುಂಬೈ ಪ್ರೆಸ್ ಕ್ಲಬ್, ಇಂತಹ ಘಟನೆಗಳು ಮರುಕಳುಹಿಸದಂತೆ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ, ಅಲ್ಲದೆ, ಪತ್ರಕರ್ತನ ಕುಟುಂಬದ ಹಿಂದೆ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್