ನವದೆಹಲಿ; ಮರಾಠ ದೊರೆ ಛತ್ರಪತಿ ಶಿವಾಜಿಯವರ ಜಯಂತಿ ಹಿನ್ನಲೆಯಲ್ಲಿ ಮಹಾನ್ ಹೋರಾಟಗಾರನನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಸ್ಮರಿಸಿದ್ದಾರೆ.
ಶಿವಾಜಿಯವರ ಜಯಂತಿ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು ಶಿವಾಜಿ ಮಹಾರಾಜರಿಗೆ ತಲೆ ಬಾಗುತ್ತೇನೆಂದು ಹೇಳಿದ್ದಾರೆ.
ಶಿವಾಜಿ ಮಹಾರಾಜರಿಗೆ ತಲೆಬಾಗುತ್ತೇನೆ. ಜೈ ಶಿವಾಜಿ ಎಂದು ಟ್ವೀಟ್ ಮಾಡಿರುವ ಅವರು, ಶಿವಾಜಿಯವರ ವ್ಯಕ್ತಿತ್ವ ಬಣ್ಣಿಸುವ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.