ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ಇಂದು ಗುಜರಾತಿನ ಅಕ್ಷರಧಾಮ ದೇವಸ್ಥಾನ ಹಾಗೂ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿತ್ತು. 
ದೇಶ

ಸಬರಮತಿ ಆಶ್ರಮ, ಅಕ್ಷರಧಾಮ ದೇವಸ್ಥಾನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ, ಕುಟುಂಬ ಭೇಟಿ

ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ಇಂದು ಗುಜರಾತಿನ ಸಬರಮತಿ ಆಶ್ರಮ ಹಾಗೂ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿತ್ತು.

ಗಾಂಧಿನಗರ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ಇಂದು ಗುಜರಾತಿನ ಸಬರಮತಿ ಆಶ್ರಮ ಹಾಗೂ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿತ್ತು.

 ತನ್ನ ಮೂವರು ಮಕ್ಕಳೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಟ್ರುಡ್ಯೋ  ದೇವಾಲಯದ ಸುಂದರ ಕೆತ್ತನೆ ಕಂಡು ಬೆರಗಾದರು. ಇದೇ ವೇಳೆ ಅಹ್ಮದಾಬಾದಿನ ಸಬರಾತಿನ ಆಶ್ರಮಕ್ಕೆ ತೆರಳಿದ ಟ್ರುಡ್ಯೂ ಕುಟುಂಬ ರಾಷ್ಟ್ರಪಿತ ಮಹತ್ಮಾಗಾಂಧಿ ಜೀವನ ಚರಿತ್ರೆ ಕುರಿತು ವಿವರ ಪಡೆದರು. ಅಲ್ಲದೇ ಗಾಂಧಿ ಬಳಸುತ್ತಿದ್ದ ಚರಕದಿಂದ ನೂಲು ನೇಯುವ ಯತ್ನ ನಡೆಸಿದರು.

ನಿನ್ನೆ ದಿನ ಆಗ್ರಾದಲ್ಲಿರುವ ಪ್ರೇಮಸೌಧ ತಾಜ್ ಮಹಲ್  ಸೌಂದರ್ಯವನ್ನು ಈ ಕುಟುಂಬ ಕಣ್ತುಂಬಿಕೊಂಡಿತ್ತು. 35 ವರ್ಷಗಳ ಹಿಂದೆ ತಾಜ್ ಮಹಲ್ ಗೆ ಭೇಟಿ ನೀಡಿದ್ದೆ, ಆದರೆ, ಈಗ ತನ್ನ ಕುಟುಂಬದೊಂದಿಗೆ ಭಾರತ ಪ್ರವಾಸ ಕೈಗೊಂಡಿದ್ದು, ಅದ್ಬುತ ಅನುಭವವಾಗುತ್ತಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.

 ಟ್ರೂಡ್ಯೂ ಗುಜರಾತ್ ಭೇಟಿ ವೇಳೆ ಮೋದಿ ಗೈರು
ಜಸ್ಟಿನ್ ಟ್ರುಡ್ಯೂ ಗುಜರಾತಿಗೆ ಭೇಟಿ ನೀಡಿರುವ ಮೊದಲ ಕೆನಡಾದ ಪ್ರಧಾನಮಂತ್ರಿಯಾಗಿದ್ಗಾರೆ. ಆದರೆ, ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಇಲ್ಲದಿರುವುದು ಕೆನಡಾದ ಮಾಧ್ಯಮಗಳ ಕಣ್ಣು ಕೆಂಪಾಗಿಸಿವೆ.

ವಿದೇಶದ ಪ್ರಮುಖ ಗಣ್ಯರು ಗುಜರಾತಿಗೆ ಆಗಮಿಸಿದ್ದ ಸಂದರ್ಭದಲೆಲ್ಲ ನರೇಂದ್ರಮೋದಿ ಇರುತ್ತಿದ್ದರು. ಕಳೆದ ತಿಂಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು, ಕಳೆದ ವರ್ಷ ಜಪಾನ್ ಪ್ರಧಾನಿ ಶಿಂಜೋ ಅಬೆ, ಮತ್ತು ಚೀನಾ ಅಧ್ಯಕ್ಷ ಕ್ಸಿ-ಜಿನ್ ಪಿಂಗ್ ಗುಜರಾತಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಖುದ್ಧು ಪ್ರಧಾನಮಂತ್ರಿ ನರೇಂದ್ರಮೋದಿ ಅವರೇ ಸ್ವಾಗತಿಸಿದ್ದರು.

ಆದರೆ, ಈ ಬಾರಿ ಪ್ರಧಾನಿ ನರೇಂದ್ರಮೋದಿ ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಸ್ಟಿನ್ ಟ್ರುಡ್ಯೂ ಅವರನ್ನು ಬರಮಾಡಿಕೊಂಡರು.

 ಕೆನಡಾದಲ್ಲಿ ಪ್ರತ್ಯೇಕ ಖಾಲಿಸ್ತಾನ್ ರಾಜ್ಯಕ್ಕಾಗಿ ಭಾರತ ಬೆಂಬಲಿಸುತ್ತಿದೆ ಈ ಉದ್ದೇಶದಿಂದಲೇ ಟ್ರುಡ್ಯೋ ಅಕ್ಷರಧಾಮ ಭೇಟಿ ವೇಳೆ ಪ್ರಧಾನಿ ಮೋದಿ  ಗೈರಾಗಿದ್ದರು ಎಂಬಂತಹ ಮಾಹಿತಿಗಳು ಕೇಳಿಬರುತ್ತಿವೆ.



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT