ಉತ್ತರ ಪ್ರದೇಶ: ಕಚ್ಚಿದ ಹಾವಿನ ಹೆಡೆಯನ್ನೇ ಅಗಿದು ಸೇಡು ತೀರಿಸಿಕೊಂಡ ಭೂಪ!
ಹಾವು ಕಚ್ಚಿತೆಂದು ಕ್ರೋಧಗೊಂಡ ವ್ಯಕ್ತಿಯೊಬ್ಬ ಹಾವಿನ ಹೆಡೆಯನ್ನೇ ಕಚ್ಚಿ ತಂದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ನಡೆದಿದೆ...
ಲಕ್ನೋ: ಹಾವು ಕಚ್ಚಿತೆಂದು ಕ್ರೋಧಗೊಂಡ ವ್ಯಕ್ತಿಯೊಬ್ಬ ಹಾವಿನ ಹೆಡೆಯನ್ನೇ ಕಚ್ಚಿ ತಂದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ನಡೆದಿದೆ.
ಸೊನೆಲಾಲ್ ಎಂಬಾತ ತನಗೆ ಹಾವು ಕಚ್ಚಿದೆ ಎಂದು ತಿಳಿದು ಅದರ ತಲೆಯನ್ನೇ ಕಚ್ಚಿ ತಿಂದಿದ್ದಾನೆ, ಆದರೆ ಆತನಿಗೆ ಹಾವು ಕಚ್ಚಿರುವ ಯಾವುದೇ ಗುರುತಿಲ್ಲ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.
ಪ್ರಜ್ಞಾಹೀನನಾಗಿ ಬಿದ್ದಿದ್ದ ಶುಕ್ಲಾಪುರ್ ಬಗಾರ್ ಗ್ರಾಮದ ಸೊನೆಲಾಲ್ ನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ 3 ಗಂಟೆಗಳ ನಂತರ ಆತನಿಗೆ ಪ್ರಜ್ಞೆ ಬಂದು ಅಂದಿನ ದಿನವೇ ಡಿಸ್ಚಾರ್ಜ್ ಮಾಡಿ ಕಳುಹಿಸಲಾಯಿತು,
ಜಾನುವಾರುಗಳಿಗೆ ಹೊಲದಲ್ಲಿ ಮೇವು ಕತ್ತರಿಸುವಾಗ ಹಾವು ಕಚ್ಚಿತು. ಕೋಪಗೊಂಡ ತಾನು ಹಾವನ್ನು ಹಿಡಿದು ಅದರ ಹೆಡೆಯನ್ನು ಕಚ್ಚಿ ತಿಂದು ನಂತರ ಉಗಿದಿದ್ದಾಗಿ ಹೇಳಿದ್ದಾನೆ, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಸೊನೆಲಾಲ್ ಗೆ ಹಾವು ಕಚ್ಚಿದೆ ಎಂದು ನೆರೆಹೊರೆಯವರು ತಿಳಿಸಿದರು, ಆದರೆ ಆತನ ದೇಹದ ಯಾವುದೇ ಭಾಗದಲ್ಲಿ ಹಾವು ಕಚ್ಚಿರುವ ಗುರುತು ಇರಲಿಲ್ಲ ಎಂದು ಹೇಳಿದ್ದಾರೆ. ಸೊನೆಲಾಲ್ ನ ಸೈಕಲಾಜಿಕಲ್ ವರ್ತನೆ ಆಸ್ಪತ್ರೆ ಸಿಬ್ಬಂದಿಗೆ ಆಶ್ಟರ್ಯ ಮೂಡಿಸಿದೆ,
ಆತನ ಮಾದಕ ವ್ಯಸನಿ, ಹೀಗಾಗಿ ಆತ ಹಾವಿನ ಹೆಡೆಯನ್ನು ಕಚ್ಚಿ ತಿಂದು ಜೀರ್ಣಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇನ್ನೂ ಸೊನೆಲಾಲ್ ಅಸಹಜವಾಗಿ ವರ್ತಿಸುತ್ತಿದ್ದಾವೆ. ಆತನ ಮನಸ್ಥಿತಿ ಸಾಮಾನ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.