ಪುಣೆ: ರಾಷ್ಟ್ರ ರಾಜಕಾರಣದಲ್ಲಿ ವಯಕ್ತಿಕ ಟೀಕೆ,ಆರೋಪಗಳು ಪ್ರವೃತ್ತಿಯಾಗುತ್ತಿರುವುದಕ್ಕೆ ಎನ್ ಸಿಪಿ ಮುಖಂಡ ಶರದ್ ಪವಾರ್ ಆಕ್ಷೇಪ ವ್ಯಕ್ತ ಪಡಿಸಿದ್ದು, ಜವಹರ್ ಲಾಲ್ ನೆಹರು ಅವರನ್ನು ಪ್ರಧಾನಿ ಮೋದಿ ಟೀಕಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನೀತಿ ನಿಯಮಗಳನ್ನು ಟೀಕಿಸುವುದು ಸರಿ, ಆದರೆ ಮಾಜಿ ಪ್ರಧಾನಿ ಜವಹರ್ ಲಾಲ್ ಅವರು ದೇಶಕ್ಕಾಗಿ ಏನು ಮಾಡಲಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ, ದೇಶದ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವ ಬಲ ಪಡಿಸಲು ನೆಹರು ಯಾವುದೇ ಕೊಡುಗೆ ನೀಡಲಿಲ್ಲ ಎಂಬ ಆರೋಪಕ್ಕೆ ನನ್ನ ಸಹಮತವಿಲ್ಲ,12 ನೇ ಶತಮಾನದಲ್ಲಿ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದರೇ, ಅದಾದ ನಂತರವು ಬ್ರಿಟಿಷರು ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ.
ಮಹಾರಾಷ್ಚ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಸಂದರ್ಶನದಲ್ಲಿ ಮಾತನಾಡಿದ ಶರದ್ ಪವಾರ್, ಭಾರತದಲ್ಲಿ ಪ್ರಜಾಪ್ರಭುತ್ವ ಸಮರ್ಥವಾಗಲು ಮಾಜಿ ಪ್ರಧಾನಿ ನೆಹರೂ ಕಾರಣ ಎಂದು ಯಶವಂತ್ ರಾವ್ ಚವಾಣ್ ಹೇಳುತ್ತಿದ್ದರು ಎಂದು ಪವಾರ್ ಸ್ಮರಿಸಿದರು.
ಸೈದ್ಧಾಂತಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಯಕ್ತಿಕವಾಗಿ ಗೌರವ ನೀಡುತ್ತಿದ್ದರು. ಯಶವಂತರಾವ್ ಅವರಂಥ ರಾಜಕೀಯ ನಾಯಕರುಗಳಿಗೆ ದೇಶದ ಹಿತವೇ ಮೊದಲ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಬೇರೆ ರಾಜ್ಯದ ನಾಯಕರುಗಳಿಗೇಕೆ ದೇಶ ಮೊದಲ ಆದ್ಯತೆ ಆಗುವುದಿಲ್ಲ ಎಂಬ ರಾಜ್ ಠಾಕ್ರೆ ಪ್ರಶ್ನೆಗೆ ಉತ್ತರಿಸಿದ ಪವಾರ್, ಮಹಾರಾಷ್ಟ್ರ ಜನತೆಗೆ ಪ್ರಾದೇಶಿಕತೆಗಿಂತ ದೇಶ ಮುಖ್ಯ ಎಂಬುದನ್ನು ಮನಗಂಡಿದ್ದಾರೆ. ಎಂದು ಹೇಳಿದ ಅವರು ಪ್ರಧಾನಿ ಆದವರಿಗೆ ಯಾವಾಗಲೂ ದೇಶ ಮೊದಲ ಆದ್ಯತೆ ಆಗಬೇಕು ಎಂದುಪ ಕಿವಿಮಾತು ಹೇಳಿದ್ದಾರೆ.
ಅಹಮದಾಬಾದ್ ಗೆ ವಿದೇಶಿಗರು ಭೇಟಿ ನೀಡಿದಾಗ ಬರುವ ಅತಿಥಿಗಳನ್ನು ಪ್ರಧಾನಿ ಮೋದಿ ಆಲಂಗಿಸಿಕೊಳ್ಳುವ ಬಗ್ಗೆ ಬಿಜೆಪಿ ಸದಸ್ಯರೇ ಖಾಸಗಿಯಾಗಿ ಮಾತನಾಡಿದ್ದಾರೆ ಎಂದು ತಿಳಿದಿದ್ದಾರೆ. ಯಾರೇ ದೇಶದ ನಾಯಕರಾಗದೂ ಅಂಥವರಿಗೆ ದೇಶವೇ ಮೊದಲ ಆದ್ಯತೆಯಾಗಿಬೇಕು ಎಂಹು ಹೇಳಿದ್ದಾರೆ,
ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಂದು ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಪ್ರತಿ ಟೀಕಿಸಿದ್ದರು. ಪ್ರಧಾನಿ ಮೋದಿ ಅರ್ಥಹೀನರ ಕೈ ಹಿಡಿದು ರಾಜಕೀಯಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ,
ಮೋದಿ ಬಹಳ ವರ್ಷಗಳ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ, ದೇಶಕ್ಕಾಗಿ ಅವರು ಶ್ರಮ ಪಡಲಿದ್ದಾರೆ. ಆದರೆ ದೇಶದ ಆಡಳಿತ ನಡೆಸುವುದೇ ಬೇರೆ, ರಾಜ್ಯದ ಆಡಳಿತ ನಡೆಸುವುದರಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಿದ್ದಾರೆ. ದೇಶದ ಆಡಳಿತ ಉತ್ತಮವಾಗಿ ನಡೆಸಲು ತಂಡ ಬೇಕು ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos