ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತ ಭೇಟಿ ಬಗ್ಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಕೆನಡಾ ಪ್ರಧಾನಿಯೊಂದಿಗಿನ ಮಾತುಕತೆಯನ್ನು ಎದುರುನೋಡುತ್ತಿರುವುದಾಗಿ ಹೇಳಿದ್ದಾರೆ.
ಫೆ.22 ರಂದು ಸಂಜೆ ಪ್ರಧಾನಿ ಮೋದಿ 2015 ರಲ್ಲಿ ತಮ್ಮ ಕೆನಡಾ ಭೇಟಿ ವೇಳೇ ಟ್ರುಡೋ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೊ ಹಾಕಿ ಟ್ವೀಟ್ ಮಾಡಿದ್ದು, ಜಸ್ಟಿನ್ ಟ್ರುಡೋ ಹಾಗೂ ಅವರ ಕುಟುಂಬ ಸದಸ್ಯರು ಭಾರತ ಭೇಟಿಯಿಂದ ಸಂತಸಗೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.