ದೇಶ

ಮೇವು ಹಗರಣ: ಜಾರ್ಖಂಡ್ ಹೈಕೋರ್ಟ್ ನಿಂದ ಲಾಲೂ ಪ್ರಸಾದ್ ಗೆ ಜಾಮೀನು ನಿರಾಕರಣೆ

Raghavendra Adiga
ರಾಂಚಿ (ಜಾರ್ಖಂಡ್): ಮೇವು ಹಗರಣ ವಿಚಾರವಾಗಿ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದೆ.
ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯವು ಲಾಲೂ ಪ್ರಸಾದ್ ಅವರಿಗೆ ಮೂರೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಆಗ ಪ್ರಕರಣದ ತೀರ್ಪನ್ನು ಪ್ರಶ್ನಿಸಿದ್ದ ಯಾದವ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು
ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿ  ಇದಾಗಲೇ ರಾಂಚಿ ಜೈಲಿನಲ್ಲಿರುವ ಲಾಲೂ ಪ್ರಸಾದ್ ಯಾದವ್ ದಿಯೋಘರ್ ಖಜಾನೆಯಿಂದ 89.27 ಲಕ್ಷ ಹಣವನ್ನು ಅಕ್ರಮವಾಗಿ ಪಡೆದಿದ್ದ ಆರೋಪ ಅವರ ಮೇಲಿತ್ತು. ಲಾಲೂ ಪ್ರಸಾದ್ ಯಾದವ್ ಅವರು ಇದಾಗಲೇ 2013, 2017 ಹಾಗೂ 2018ರಲ್ಲಿ ಮೂರು ಮೇವು ಹಗರಣ ಪ್ರಕರಣಗಳಲ್ಲಿ  ಆರೋಪಿ ಎಂದು ಸಾಬೀತಾಗಿದ್ದು  ಕ್ರಮವಾಗಿ ಐದು, ಮೂರೂವರೆ ಹಾಗೂ ಐದು ವರ್ಷಗಳ ಕಾರಾಗೃಹವಾಸ ಶಿಕ್ಷೆಗೆ ಈಡಾಗಿದ್ದಾರೆ. 
SCROLL FOR NEXT