ಕಾಂಗ್ರೆಸ್ ಟ್ವೀಟ್ 
ದೇಶ

ಶ್ರೀದೇವಿ ಕುರಿತ ಕಾಂಗ್ರೆಸ್ ಟ್ವೀಟ್ ಗೆ ಉರಿದುಬಿದ್ದ ಜಾಲತಾಣಿಗರು!

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಈಗ ನಿಧನರಾಗಿರುವ ಶ್ರೀದೇವಿ ಕುರಿತು ಟ್ವೀಟ್ ಮಾಡಲು ಹೋಗಿ ಕಾಂಗ್ರೆಸ್ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ.  ಈಗ ನಿಧನರಾಗಿರುವ ಶ್ರೀದೇವಿ ಕುರಿತು ಟ್ವೀಟ್ ಮಾಡಲು ಹೋಗಿ ಕಾಂಗ್ರೆಸ್ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. 
ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿರುವ ಕಾಂಗ್ರೆಸ್ 2013 ರಲ್ಲಿ ಯುಪಿಎ ಸರ್ಕಾರ ಶ್ರೀದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾಗಿ ಹೇಳಿಕೊಂಡಿದೆ.  "ಶ್ರೀದೇವಿ ಅವರ ನಿಧನದ ವಾರ್ತೆ ಕೇಳಲು ವಿಷಾದಿಸುತ್ತೇವೆ,  ಶ್ರೀದೇವಿ ಅವರ ಸಾವಿಗೆ ಸಂತಾಪ ಸೂಚಿಸುತ್ತೆವೆ, ಅವರಿಗೆ ಯುಪಿಎ ಸರ್ಕಾರ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತ್ತು ಎಂದು ಟ್ವೀಟ್ ಮಾಡಿತ್ತು.  ಆದರೆ ಟ್ವಿಟರ್ ನಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ತೆಗೆದು ಹಾಕಿದೆ. 
ಕಾಂಗ್ರೆಸ್ ಸಂವೇದನೆ ಇಲ್ಲದೇ ನಡೆದುಕೊಳ್ಳುತ್ತಿದೆ, ಎಂದು  ಆರೋಪಿಸಿರುವ ಟ್ವಿಟರ್ ಬಳಕೆದಾರರು, ಕಾಂಗ್ರೆಸ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಮಂದಿ ಕಾಂಗ್ರೆಸ್ ನ ಕಾಲೆಳೆದಿದ್ದು ಶ್ರೀದೇವಿ ಅವರ ಸಾವಿಗೆ ಪ್ರಧಾನಿ ಮೋದಿ ಅವರನ್ನು ದೂರಬೇಡಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ