ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮಾನವ ರಹಿತ ಯುದ್ಧ ವಿಮಾನ ರುಸ್ತುಂ-2 ಡ್ರೋಣ್ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ.
ಮೇಕ್ ಇನ್ ಇಂಡಿಯಾ ಭಾಗವಾಗಿ ಡ್ರೋನ್ ರೀತಿಯ ಯುದ್ಧ ವಿಮಾನವನ್ನು ತಯಾರಿಸಲಾಗಿತ್ತು. ಈ ಡ್ರೋಣ್ ಶಕ್ತಿಶಾಲಿ ಎಂಜಿನ್ ಹೊಂದಿದ್ದು 24 ಗಂಟೆ ಹಾರಾಟ ನಡೆಸಬಲ್ಲ, ಕಣ್ಗಾವಲು ಇಡುವ, ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯಲು ಶಕ್ತವಾಗಿದೆ.
2009ರ ನವೆಂಬರ್ 16ರಂದು ರುಸ್ತುಂ-1 ಪ್ರಯೋಗ ಯಶಸ್ವಿಯಾಗಿತ್ತು. ಏಳು ವರ್ಷ ನಂತರ ಸ್ವದೇಶಿ ನಿರ್ಮಿತ ರಕ್ಷಣಾ ವಿಮಾನಗಳ ಯಶಸ್ಸು ಹೊಸ ಭರವಸೆ ಮೂಡಿಸಿದೆ.
ಇಂದು ನಡೆದ ಪ್ರಯೋಗಾರ್ಥ ಪರೀಕ್ಷೆಗೆ ಡಿಆರ್‌ಡಿಒ ಮುಖ್ಯಸ್ಥ ಕ್ರಿಸ್ಟರ್, ಡೈರಕ್ಟರ್ ಜನರಲ್ ಸಿಪಿ ರಾಮನಾರಾಯಣನ್, ಜೆ ಮಂಜುಳಾ ಘಟನೆಗೆ ಸಾಕ್ಷಿಯಾಗಿದ್ದರು. ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ.