ಲಖನೌ: ರೈಲ್ವೇ ಹಳಿ ಮೇಲೆ ನಿಂತು ಮಾತನಾಡುತ್ತಾ ಮೈ ಮರೆತಿದ್ದವರ ಮೇಲೆ ರೈಲು ಹರಿದ ಪರಿಣಾಮ ಸ್ಥಳದಲ್ಲಿಯೇ ಐವರು ದುರ್ಮರಮವನ್ನಪ್ಪಿ, ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಉತ್ತರಪ್ರದೇಶದ ಹಪುರ್ ಜಿಲ್ಲೆಯ ಪಿಲ್ಖುವಾ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಕಳೆದ ರಾತ್ರಿ ಜಿಲ್ಲೆಯ ಸಾದಿಕ್ಪುರಾದಲ್ಲಿ 7 ಸ್ನೇಹಿತರು ರೈಲ್ವೇ ಹಳಿ ಬಳಿ ನಿಂತು ಹರಟೆ ಹೊಡೆಯಲು ಆರಂಭಿಸಿದ್ದಾರೆ. ಮಾತಿನಲ್ಲಿ ಮೈಮರೆತಿದ್ದವರಿಗೆ, ರೈಲು ಬರುವುದು ತಿಳಿದಿಲ್ಲ. ಈ ವೇಳೆ ಏಕಾಏಕಿ ಬಂದಿರುವ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರು ರೈಲ್ವೇ ಹಳಿ ಬಳಿ ನಿಂತಿದ್ದು, ಹಳಿ ದಾಟಲು ಯತ್ನಿಸುತ್ತಿದ್ದರೋ ಅಥವಾ ಹಳಿ ಮೇಲೆ ಕುಳಿತಿದ್ದರೋ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಡ್ಸ್ ರೈಲು ಯುವಕರ ಮೇಲೆ ಹರಿದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics