ಲೂಧಿಯಾನ: ಪಂಜಾಬ್ ನ ಲೂಧಿಯಾನ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ.
ಫೆಬ್ರವರಿ 24ರಂದು ಲೂಧಿಯಾನ ಮುನಿಸಿಪಲ್ ಕಾರ್ಪೊರೇಷನ್ ಗೆ ಚುನಾವಣೆ ನಡೆದಿತ್ತು. ಇಂದು ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 95 ವಾರ್ಡುಗಳ ಪೈಕಿ 62 ವಾರ್ಡುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಮತ್ತು ಬಿಜೆಪಿ ಮೈತ್ರಿಕೂಟ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಎಲ್‌ಐಪಿ ಹಾಗೂ ಆಪ್ ಮೈತ್ರಿಕೂಟ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಈ ಗೆಲುವು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ಸಿಕ್ಕ ಗೆಲುವು ಎಂದಿದ್ದಾರೆ.
ಪಂಜಾಬ್‌ನಲ್ಲಿ 2017ರ ಮಾರ್ಚ್‌ನಿಂದ ಅಧಿಕಾರದಲ್ಲಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ, ಅಮೃತಸರ, ಪಟಿಯಾಲ ಮತ್ತು ಜಲಂಧರ ಸ್ಥಳೀಯಾಡಳಿತೆ ಚುನಾವಣೆಗಳನ್ನು ಗೆದ್ದುಕೊಂಡಿದೆ.