ದೇಶ

ಅನುವಂಶೀಯ ಕಾಯಿಲೆಗಳಿಗೆ ಆರೋಗ್ಯ ವಿಮೆ ನಿರಾಕರಿಸುವುದು ತಾರತಮ್ಯ ಎಸಗಿದಂತೆ: ದೆಹಲಿ ಹೈಕೋರ್ಟ್

Sumana Upadhyaya

ನವದೆಹಲಿ: ವಂಶಪಾರಂಪರ್ಯ ಕಾಯಿಲೆಯಿರುವವರು ಆರೋಗ್ಯ ವಿಮೆಯಿಂದ ವಂಚಿತರಾಗುವವರಿಗೆ ಅನುಕೂಲವಾಗುವಂತಹ ಮಹತ್ವಪೂರ್ಣ ಆದೇಶವನ್ನು ದೆಹಲಿ ಹೈಕೋರ್ಟ್ ಹೊರಡಿಸಿದ್ದು, ಸಂವಿಧಾನದ 21ನೇ ವಿಧಿ ಪ್ರಕಾರ ಆರೋಗ್ಯ ಮತ್ತು ಆರೋಗ್ಯ ಸೇವೆಯಡಿ ಆರೋಗ್ಯ ವಿಮೆ ಹೊಂದುವುದು ಮನುಷ್ಯನ ಹಕ್ಕುಗಳಲ್ಲಿ ಒಂದಾಗಿರುತ್ತದೆ.
ಆದೇಶ ಹೊರಡಿಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ವಂಶಪಾರಂಪರ್ಯ ಕಾಯಿಲೆಗಳಿರುವ ವ್ಯಕ್ತಿಗಳಿಗೆ ಆರೋಗ್ಯ ವಿಮೆ ನೀಡದೆ ತಾರತಮ್ಯ ತೋರುವುದು ಅಸಂವಿಧಾನಿಕ ಕ್ರಮ ಎಂದು ಹೇಳಿದ್ದಾರೆ.

ಜಯ ಪ್ರಕಾಶ್ ತಾಯಲ್ ಎನ್ನುವವರು ಯುನೈಟೆಡ್ ಇಂಡಿಯಾ ಅಶ್ಯೂರೆನ್ಸ್ ನಿಂದ ಆರೋಗ್ಯ ವಿಮೆಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಿರಾಕರಿಸಿದ ವಿಚಾರಣೆಗೆ ಸಂಬಂಧಪಟ್ಟಂತೆ ಈ ಆದೇಶ ನೀಡಿದ್ದಾರೆ. ಅವರು ಹೈಪರ್ಟ್ರೋಫಿಕ್ ಅಬ್ಸ್ಟ್ರಕ್ಟಿವ್ ಕಾರ್ಡಿಯೊಮಿಯೊಪತಿಯಿಂದ ಬಳಲುತ್ತಿದ್ದರು. ಅವರಿಗೆ ವಂಶಪಾರಂಪರ್ಯ ಕಾಯಿಲೆಯಿಂದ ಬಳಲುತ್ತಿರುವುದರಿಂದ ಆರೋಗ್ಯ ವಿಮೆ ನೀಡಲು ವಿಮಾ ಕಂಪೆನಿ ನಿರಾಕರಿಸಿತ್ತು.

ಆರೋಗ್ಯ ವಿಮೆ ಯಿಂದ ಎಲ್ಲಾ ರೂಪಗಳಲ್ಲಿನ ಆನುವಂಶಿಕ ಅಸ್ವಸ್ಥತೆಗಳನ್ನು ಬಹಿಷ್ಕರಿಸುವುದು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುತ್ತದೆ. ಹೃದಯದ ಪರಿಸ್ಥಿತಿಗಳು, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಜನಸಂಖ್ಯೆಯ ದೊಡ್ಡ ಪ್ರಮಾಣದ ಮೇಲೆ ಪ್ರಭಾವ ಬೀರುವ ಪ್ರಚಲಿತ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಹಲವಾರು  ಅನುವಂಶಿಕ ಅಸ್ವಸ್ಥತೆಗಳಾಗಿ ವಿಂಗಡಿಸಬಹುದು.ಅನುವಂಶಿಕ ಕಾಯಿಲೆಗಳಿಗೆ ಆರೋಗ್ಯ ವಿಮೆಯನ್ನು ನಿರಾಕರಿಸಿದರೆ ವೈದ್ಯಕೀಯ ವಿಮೆ ಪಡೆದುಕೊಳ್ಳುವ ಎಲ್ಲಾ ಉದ್ದೇಶ ಸೋಲುತ್ತದೆ ಎಂದು ನ್ಯಾಯಾಧೀಶೆ ಹೇಳಿದರು.

SCROLL FOR NEXT