ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡೈ ಕ್ವಾಂಗ್ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಟ್ರಾನ್ ಡೈ ಕ್ವಾಂಗ್ ಅವರೊಂದಿಗೆ ವಿಯೆಟ್ನಾಮ್ ನ ಕಮ್ಯುನಿಸ್ಟ್ ಪಕ್ಷದ ನಾಯಕರೂ ಆಗಮಿಸಲಿದ್ದು, ಉದ್ಯಮಿಗಳ ನಿಯೋಗವೂ ಭಾರತಕ್ಕೆ ಭೇಟಿ ನೀಡಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತ ಭೇಟಿಯಲ್ಲಿ ಕ್ವಾಂಗ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಾಲಿದ್ದು, ಭಾರತದ ಪ್ರಮುಖ ಉದ್ಯಮಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ವಿಯೆಟ್ನಾಮ್ ಅಧ್ಯಕ್ಷರ ಭೇಟಿಯಿಂದ ಭಾರತ-ವಿಯೆಟ್ನಾಮ್ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಇದೆ.