ದೇಶ

ರಾಜಕೀಯ ಸೇರೋದಿಲ್ಲವೆಂದು ಪ್ರತಿಜ್ಞೆ ಮಾಡಿ: ಸತ್ಯಗ್ರಹದಲ್ಲಿ ಕೈ ಜೋಡಿಸುವವರಿಗೆ ಅಣ್ಣಾ ಷರತ್ತು

Srinivas Rao BV
ಲಖನೌ: 2011 ರಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನ ಪ್ರಾರಂಭಿಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮುಂದಿನ ತಿಂಗಳಿನಿಂದ ಸತ್ಯಾಗ್ರಹವನ್ನು ಪ್ರಾರಂಭಿಸಲಿದ್ದು, ತಮ್ಮೊಂದಿಗೆ ಕೈಜೋಡಿಸುವವರು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕಿದೆ. 
ಈ ಹಿಂದೆ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ ಹೋರಾಟದ ಮೂಲಕ ಮುನ್ನೆಲೆಗೆ ಬಂದಿದ್ದ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ಆಶಯದ ವಿರುದ್ಧವಾಗಿ ರಾಜಕೀಯ ಸೇರಿ ಈಗ ದೆಹಲಿ ಸಿಎಂ ಆಗಿದ್ದಾರೆ. ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಕಿರಣ್ ಬೇಡಿ ಸಹ ರಾಜಕೀಯಕ್ಕೆ ಸೇರಿ ಈಗ ಪಾಂಡಿಚರಿಯ ಲೆಫ್ಟಿನೆಂಟ್ ಗೌರ್ನರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮುಂದಿನ ಹೋರಾಟಕ್ಕೆ ಸಜ್ಜುಗೊಳ್ಳುತ್ತಿರುವ ಅಣ್ಣಾ ಹಜಾರೆ ಎಚ್ಚೆತ್ತುಕೊಂಡಿದ್ದು ತಮ್ಮ ಮುಂದಿನ ಹೋರಾಟದಲ್ಲಿ ಕೈ ಜೋಡಿಸಲು ಇಚ್ಛಿಸುವವರಿಂದ ರಾಜಕೀಯಕ್ಕೆ ಸೇರುವುದಿಲ್ಲ ಎಂಬ ಪ್ರಮಾಣ ಪತ್ರ ಪಡೆಯಲಿದ್ದಾರೆ. 
ತಮ್ಮ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾ ಹಜಾರೆ, ಈ ಹಿಂದೆ ನನ್ನೊಂದಿಗೆ ಗುರುತಿಸಿಕೊಂಡಿದ್ದವರು ರಾಜಕೀಯಕ್ಕೆ ಸೇರ್ಪಡೆಯಾಗಿದ್ದಾರೆ.  ಆದ್ದರಿಂದ  ಈಗ ನನ್ನೊಂದಿಗೆ ಗುರುತಿಸಿಕೊಳ್ಳುವವರು " ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಸೇರುವುದಿಲ್ಲ ಎಂದು ಪ್ರಮಾಣ ಪತ್ರ ನೀಡಬೇಕು ನನ್ನೊಂದಿಗೆ ಗುರುತಿಸಿಕೊಳ್ಳುವವರು ರಾಜಕೀಯಕ್ಕೆ ಸೇರಿದರೆ ಅಂಥವರನ್ನು ಕೋರ್ಟ್ ಮುಂದೆ ನಿಲ್ಲಿಸುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. 
SCROLL FOR NEXT