ಹೋಲಿ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆಯಿಂದ 500 ವಿಶೇಷ ರೈಲುಗಳ ಸೌಲಭ್ಯ
ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ನವದೆಹಲಿ: ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ದೆಹಲಿಯಿಂದ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶಗಳಿಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದ್ದು ಮಾ.02 ರಂದು ಹೋಲಿ ಹಬ್ಬ ಆಚರಣೆ ಮಾಡಲಾಗುತ್ತದೆ. ಇದೇ ವೇಳೇ 54 ವಿಶೇಶ ರೈಲುಗಳ ಸೌಲಭ್ಯ ಕಲ್ಪಿಸುವುದಾಗಿ ಈಶಾನ್ಯ ರೈಲ್ವೆ ಸಹ ಹೇಳಿದ್ದು.
ರೈಲ್ವೆ ಇಲಾಖೆ ಕಳೆದ ವರ್ಷದ ಹೋಲಿಗೆ ಹೋಲಿಸಿದರೆ ಈ ಬಾರಿ 60 ಹೆಚ್ಚುವರಿ ರೈಲುಗಳ ಸಂಚಾರವನ್ನು ಕಲ್ಪಿಸಿದೆ. ಕಳೆದ ವರ್ಷ 440 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.