ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ರಾಷ್ಟ್ರೀಯ ವಿಜ್ಞಾನ ದಿನ: ವಿಜ್ಞಾನ ಪ್ರಿಯರಿಗೆ ಪ್ರಧಾನಿ ಶುಭಾಶಯ

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ...

ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶುಭಾಶಯಗಳು. ಎಲ್ಲಾ ವಿಜ್ಞಾನ ಪ್ರಿಯರಿಗೆ ನಾನು ಶುಭಕೋರುತ್ತೇನೆ. ಅವರ ವೈಜ್ಞಾನಿಕ ಕೆಲಸಗಳನ್ನು ವಿಸ್ತರಿಸಲು ಅವರಿಗೆ ಶುಭಕೋರುತ್ತೇನೆ. ವಿಜ್ಞಾನಿಗಳ ಬಗ್ಗೆ ಭಾರತಕ್ಕೆ ಅಪಾರವಾದ ಹೆಮ್ಮೆಯಿದೆ. ಕಳೆದ ಮನ್ ಕಿ ಬಾತ್ ನಲ್ಲಿ ವಿಜ್ಞಾನ ಬಗ್ಗೆ ಮಾತನಾಡಿದ್ದೇನೆ ಎಂದರು.

ತಮ್ಮ ಮನ್ ಕಿ ಬಾತ್ ನ 41ನೇ ಆವೃತ್ತಿಯಲ್ಲಿ ಕಳೆದ 25ರಂದು ಮಾತನಾಡಿದ ಪ್ರಧಾನಿ ಮೋದಿ, ಭೌತವಿಜ್ಞಾನಿ ಸಿ.ವಿ.ರಾಮನ್ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆದಾರರಿಗೆ ನಮನಗಳು. ಇವರ ಗೌರವಾರ್ಥ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಇಡೀ ವಿಜ್ಞಾನ ಸಮುದಾಯಕ್ಕೆ ಅಭಿನಂದನೆಗಳು ಎಂದಿದ್ದರು.

ವೈದ್ಯಕೀಯ, ಔಷಧಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದವರನ್ನು ನೆನಪಿಸಿಕೊಂಡರು. ಸರ್. ಸಿ.ವಿ.ರಾಮನ್ ಅವರು ಇದೇ ದಿನ ಬೆಳಕಿನ ಹರಡುವಿಕೆಯ ರಾಮನ್ ಎಫೆಕ್ಟ್ ನ್ನು ಕಂಡುಹಿಡಿದಿದ್ದರು.  ಇದರ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.

ಸರ್ ಸಿ.ವಿ.ರಾಮನ್ ಅವರಿಗೆ 1930ರಲ್ಲಿ ಭೌತಶಾಸ್ತ್ರದಲ್ಲಿ ರಾಮನ್ ಎಫೆಕ್ಟ್ ಅಧ್ಯಯನಕ್ಕಾಗಿ ನೊಬೆಲ್ ಪಾರಿತೋಷಕ ಲಭಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಬೈಕ್ ಚಾಲನೆ ಮಾಡುತ್ತಾ Reels ರೆಕಾರ್ಡ್, ಭೀಕರ ಅಪಘಾತದಲ್ಲಿ ಯುವತಿ ಸಾವು, ಯುವಕ ಗಂಭೀರ! video

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

SCROLL FOR NEXT