ಮಹಾರಾಷ್ಟ್ರ ಬಂದ್ ಹಿನ್ನೆಲೆಯಲ್ಲಿ ಮುಚ್ಚಿರುವ ಅಂಗಡಿ-ಮುಂಗಟ್ಟುಗಳು 
ದೇಶ

ಭೀಮಾ-ಕೊರೆಗಾಂವ್ ಹಿಂಸಾಚಾರ: ಇಂದು ಮಹಾರಾಷ್ಟ್ರ ಬಂದ್

ಮಹಾರಾಷ್ಟ್ರದ ಪುಣೆಯ ಹತ್ತಿರ ಭೀಮ ಕೊರೆಗಾವ್ ಗ್ರಾಮದಲ್ಲಿ ಮತ್ತು ಇತರ ಭಾಗಗಳಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರದ ....

ಮುಂಬೈ: ಮಹಾರಾಷ್ಟ್ರದ ಪುಣೆಯ ಹತ್ತಿರ ಭೀಮ ಕೊರೆಗಾವ್ ಗ್ರಾಮದಲ್ಲಿ ಮತ್ತು ಇತರ ಭಾಗಗಳಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರದ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಬರಿಪ ಬಹುಜನ ಮಹಾಸಂಘದ ನಾಯಕ ಪ್ರಕಾಶ್ ಅಂಬೇಡ್ಕರ್ ಇಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರದಾದ್ಯಂತ ಬಂದ್ ನಡೆಯುತ್ತಿದ್ದು ಎಂದಿನ ವ್ಯಾಪಾರ, ವಹಿವಾಟು, ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಬಗ್ಗೆ ಮಾತನಾಡಿದ ಶಾಲಾ ಬಸ್ ಮಾಲಿಕರ ಸಂಘದ ಸದಸ್ಯ ಅನಿಲ್ ಗಾರ್ಗ್, ಪರಿಸ್ಥಿತಿಯನ್ನು ನೋಡಿಕೊಂಡು ಬಸ್ ಸೇವೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇಂದು ಮುಂಬೈಯಲ್ಲಿ ಶಾಲಾ ಕಾಲೇಜು ಬಸ್ ಗಳ ಸಂಚಾರವಿರುವುದಿಲ್ಲ.ಶಾಲಾ ಮಕ್ಕಳ ಭದ್ರತೆ ವಿಚಾರದಲ್ಲಿ ಅಪಾಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂದು ಬೆಳಗ್ಗಿನ ಪರಿಸ್ಥಿತಿ ನೋಡಿಕೊಂಡು 11 ಗಂಟೆ ಹೊತ್ತಿಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 
ದಲಿತರು ಮತ್ತು ಬಲಪಂಥೀಯ ಗುಂಪಿನವರು ಎಂದು ಹೇಳಿಕೊಳ್ಳುವವರ ನಡುವೆ ಮೊನ್ನೆ ಸೋಮವಾರ ಪುಣೆ ಸಮೀಪ ಭೀಮಾ-ಕೊರೆಗಾಂವ್ ಯುದ್ಧದ ದ್ವಿಶತಮಾನ ಆಚರಣೆ ವೇಳೆ ಕಲಹ, ಘರ್ಷಣೆ ಉಂಟಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಇದು ದೇಶವಿರೋಧಿ ಆಚರಣೆಯಾಗಿರುವುದರಿಂಗ ಜಯದ ದಿನ ಎಂದು ಸಂಭ್ರಮಾಚರಣೆ ಮಾಡಬಾರದೆಂದು ಬಲಪಂಥೀಯ ಗುಂಪಿನವರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಮತ್ತು ಆರ್ಎಸ್ಎಸ್ ನವರು ಗಲಭೆ ಹುಟ್ಟುಹಾಕಿದರು ಎಂದು ವಿರೋಧಿ ಗುಂಪಿನ ಸದಸ್ಯರು ಆರೋಪಿಸುತ್ತಿದ್ದಾರೆ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ(ಅದರಲ್ಲಿ ಕಾಲಾಳುಪಡೆಗಳಾಗಿ ದಲಿತರು ಇದ್ದರು) ಮತ್ತು ಮಹಾರಾಷ್ಟ್ರದಲ್ಲಿ ಮೇಲ್ಜಾತಿಯ ಬ್ರಾಹ್ಮಣರೆನಿಸಿಕೊಂಡಿರುವ ಪೇಶಾವರ ಮಧ್ಯೆ 1818 ಜನವರಿ 1ರಂದು ಮಹಾರಾಷ್ಟ್ರದ ಕೊರೆಗಾಂವ್ ಭೀಮಾದಲ್ಲಿ ಯುದ್ಧವಾಗಿತ್ತು. ಮರಾಠರು ಯುದ್ಧದಲ್ಲಿ ಹಿಂತೆಗೆದುಕೊಂಡರು. ಅಂದಿನಿಂದ ಇದು ತಮ್ಮ ಗೆಲುವೆಂದು ಕೆಳಜಾತಿಯ ಸಮುದಾಯದವರು ಭಾವಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!