ದೇಶ

ಭೀಮಾ ಕೋರೆಗಾಂವ್ ಹಿಂಸಾಚಾರದ ಹಿಂದೆ ರಾಜಕೀಯ ದುರುದ್ದೇಶ: ಶಿವಸೇನೆ

Sumana Upadhyaya
ಮುಂಬೈ: ಭೀಮ-ಕೋರೆಗಾಂವ್ ಹಿಂಸಾಚಾರವನ್ನು ವಿರೋಧಿಸಿ ಮಹಾರಾಷ್ಟ್ರದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮತ್ತು ಬಂದ್ ಗೆ ಪ್ರತಿಕ್ರಿಯಿಸಿರುವ ಶಿವಸೇನೆ, ರಾಜ್ಯಾದ್ಯಂತ ಇಂತಹ ತೊಂದರೆ ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ನಡೆಸುತ್ತಿರುವ ಪ್ರಯತ್ನವಿದು ಎಂದು ಆರೋಪಿಸಿದೆ.
ಶಿವಸೇನಾ ಸಂಸದ ಸಂಜಯ್ ರಾವತ್ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ 200 ವರ್ಷಗಳ ಇತಿಹಾಸವಿದೆ. ಆದರೆ ಇತಿಹಾಸದ ಹೆಸರಿನಲ್ಲಿ ಯಾವುದೇ ದಂಗೆ, ಗಲಭೆಗಳು ನಡೆದಿಲ್ಲ.ಆ ಯುದ್ಧ ನಡೆದ ಸಂದರ್ಭದಲ್ಲಿ ಎಲ್ಲಾ ಜಾತಿ ಮತ್ತು ಸಮುದಾಯಗಳು ಒಗ್ಗಟ್ಟಿನಿಂದ ತಮ್ಮ ಶತ್ರುಗಳ ವಿರುದ್ಧ ಹೋರಾಡಿದ್ದರು. ಆದರೆ ಇಂದು ಜಾತಿ, ಸಮುದಾಯಗಳ ಹೆಸರಿನಲ್ಲಿ ಪ್ರತಿಭಟನೆ, ಜಗಳ ಮಾಡಿ ಶೌರ್ಯ ದಿವಸವನ್ನು ಆಚರಿಸುತ್ತಿದ್ದಾರೆ. ಇದು ಖಂಡಿತಾ ತಪ್ಪು. ರಾಜಕೀಯ ಲಾಭ ಪಡೆಯಲು ಯಾರೋ ಪ್ರಯತ್ನಿಸುತ್ತಿದ್ದಾರೆ. ಅವರ ಮುಖವಾಡ ಖಂಡಿತವಾಗಿಯೂ ಬಯಲಾಗಲಿದೆ ಎಂದು ಹೇಳಿದರು.
ಪಕ್ಷಭೇದ ಮರೆತು ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ರಾಜಕೀಯ ನಾಯಕರನ್ನು ಜನರನ್ನು ಕೆರಳಿಸುವಂಥ ಭಾಷಣಗಳನ್ನು ಮಾಡಲು ಬಿಡಬಾರದು ಎಂದು ರಾವತ್ ಹೇಳಿದರು. 
SCROLL FOR NEXT