ದೇಶ

ಕೇರಳ: ಗಣರಾಜ್ಯೋತ್ಸವ ದಿನ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರಿಂದ ರಾಷ್ಟ್ರ ಧ್ವಜಾರೋಹಣ

Raghavendra Adiga
ತಿರುವನಂತಪುರಂ: ಕಳೆದ ಬಾರಿಯ ವಿವಾದದ ಹೊರತಾಗಿ ಈ ಗಣರಾಜ್ಯ ದಿನದಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೇರಳದ ಪಾಲಕ್ಕಾಡ್ ಶಾಲೆಯೊಂದರಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. 
ಈ ಬಾರಿ, ಭಾಗವತ್ ವ್ಯಾಸ ವಿದ್ಯಾ ಫೀಠದಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಾಹಿಸುತ್ತಿದ್ದು ಈ ವೇಳೆ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಶಾಲೆಯು ಆರ್ ಎಸ್ ಎಸ್ ನ ಭಾರತೀಯ ವಿದ್ಯಾ ನಿಕೇತನದ ಆಡಳಿತಕ್ಕೆ ಒಳಪಟ್ಟಿದೆ
"ಸಂಘದ ಚಾಲಕರು ಪಾಲಕ್ಕಾಡ್ ನ ಕಳ್ಳೆಕ್ಕಡು ಎನ್ನುವಲ್ಲಿರುವ ವ್ಯಾಸ ವಿದ್ಯಾ ಪೀಠದಲ್ಲಿ ಪಂಚಾಯತ್ ಮಟ್ಟದ ಆರ್ ಎಸ್ ಎಸ್ ಕಾರ್ಯಕರ್ತರ ಮೂರು ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳುವವರಿದ್ದಾರೆ. ಕಾರ್ಯಕ್ರಮ ಗಣರಾಜ್ಯದಿನದಂದು ಪ್ರಾರಂಬಗೊಳ್ಳುವ ಕಾರಣ ಅಂದು ಅವರಿಂದ ರಾಷ್ಟ್ರಧ್ವಜಾರೋಹಣ ನೆರವೇರಲಿದೆ. ಶಾಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ನಿರ್ಧಾರ ವಿಚಿತ್ರವಾದದ್ದು. ಸಂವಿಧಾನದ ಅನುಸಾರ , ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯ ದಿನದಂದು ರಾಷ್ಟ್ರ ಧ್ವಜವನ್ನು ಹಾರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ವಾಸ್ತವವಾಗಿ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಯನ್ನು ಅಸಮಾಧಾನ ಮಾಡಿದವರ ವಿರುದ್ಧ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು. ನಮ್ಮಿಂದ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಶಾಲೆಯ ವಿರುದ್ಧ ಕ್ರಮವು ರಾಜಕೀಯ ಪ್ರೇರಿತವಾದದ್ದು" ಆರ್ ಎಸ್ ಎಸ್ ಪ್ರಾಂತೀಯ ಕಾರ್ಯನಿರ್ಘಕರಾದ ಮಾಸ್ಟರ್ ಪಿ. ಗೋಪಾಲಕುಟ್ಟಿ ಹೇಳಿದ್ದಾರೆ. 
ರಾಷ್ಟ್ರ ಧ್ವಜಾರೋಹಣ ಮಾಡುವುದಕ್ಕೆ ಆರ್ ಎಸ್ ಎಸ್ ಗೆ ಯಾವ ಹಕ್ಕಿಲ್ಲ ಎನ್ನುವ ಎಸ್ ಡಿಪಿಐ ನಂತಹಾ ಸಂಘಟನೆಗಳ ಮೂಲಭೂತವಾದವನ್ನು ಪ್ರಚೋದಿಸುವ ಸಿಪಿಎಂನ ಕಾರ್ಯಸೂಚಿಯು ಎಲ್ಲರಿಗೂ ತಿಳಿದಿರುವುದಾಗಿದೆ ಎಂದು ಅವರು ಹೇಳಿದ್ದಾರೆ. . "ಆರ್ ಎಸ್ ಎಸ್ ಈ ಹಿಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಂತಹ ಶಿಬಿರಗಳನ್ನು ಆಯೋಜಿಸಲು ಸರ್ಕಾರದ ಅನುಮತಿ ಅಗತ್ಯವಿಲ್ಲ, " ಎಂದು ಬಿಜೆಪಿ ಆಂತರಿಕ ಘಟಕದ ಸಂಚಾಲಕ ಟಿಜೆ ಮೋಹನ್ ದಾಸ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
SCROLL FOR NEXT