ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮುಸ್ಲಿಮರು ಸೀಗಡಿ ತಿನ್ನುವುದು ಇಸ್ಲಾಂ ಗೆ ವಿರೋಧ: ಹೈದರಾಬಾದ್ ಧಾರ್ಮಿಕ ಸಂಸ್ಥೆಯಿಂದ ಫತ್ವಾ

ಮುಸ್ಲಿಂ ಧರ್ಮೀಯರು ಸೀಗಡಿ ತಿನ್ನಬಾರದು ಎಂದು ಹೈದರಾಬಾದ್ ನ ಜಾಮಿಯಾ ನಿಜಾಮಿಯಾ ಫತ್ವಾ ಹೊರಡಿಸಿದೆ.

ಸೀಗಡಿಗಳು
Raghavendra Adiga
Updated On : 6 Jan 2018, 1:03 am
ಹೈದರಾಬಾದ್: ಮುಸ್ಲಿಂ ಧರ್ಮೀಯರು ಸೀಗಡಿ ತಿನ್ನಬಾರದು ಎಂದು ಹೈದರಾಬಾದ್ ನ ಜಾಮಿಯಾ ನಿಜಾಮಿಯಾ ಫತ್ವಾ ಹೊರಡಿಸಿದೆ.
ಸೀಗಡಿ ಮೀನುಗಳ ಗುಂಪಿಗೆ ಸೇರುವುದಿಲ್ಲ. ಅದು ಸಂಧಿಪದಿ (ಆರ್ಥೋಪಾಡ್) ಜಾತಿಯದಾಗಿದ್ದು ಈ ವಿಭಾಗದಲ್ಲಿ ಕೀಟಗಳು ಸಹ ಸೇರಿಕೊಳ್ಳುತ್ತವೆ. ಹುಳವನ್ನು ತಿನ್ನುವುದು ಬಹಳ ಅಸಹ್ಯಕರ ಆಗಿದ್ದು ಮುಸ್ಲಿಮರು ಅದನ್ನು ತಿನ್ನಬಾರದೆಂದು ಜಾಮಿಯಾ ಫತ್ವಾದಲ್ಲಿ ಹೇಳಲಾಗಿದೆ.
ಮುಸ್ಲಿಮರ ಆಹಾರಗಳಲ್ಲಿ ಹಲಾಲ್‌, ಹರಾಂ ಮತ್ತು ಮಖ್ರು ಎನ್ನುವ ಮೂರು ವಿಭಾಗಗಳಿವೆ. ಅದರಲ್ಲಿ ಮಖ್ರು ಎನ್ನುವ ವಿಭಾಗದಲ್ಲಿ ತಿನ್ನಲೇಬಾರದ ವಸ್ತುಗಳೆಂಬ ವಿಭಾಗವಿದ್ದು ಸೀಗಡಿ ಆ ವಿಭಾಗದಲ್ಲಿ ಬರುವುದರಿಂದ ಅದನ್ನು ಆಹಾರವನ್ನಾಗಿ ಬಳಸುವಂತಿಲ್ಲ ಎಂದು ಫತ್ವಾ ಹೇಳಿದೆ. 

Advertisement

Advertisement

ಜಾಮಿಯಾ ನಿಜಾಮಿಯಾ ಹೊರಡಿಸಿದ ಈ ಫತ್ವಾಗೆ ಮುಸ್ಲಿಂ ಧಾರ್ಮಿಕ ಮುಖಂಡರಿಂದಲೇ ವಿರೋಧಗಳು ಕೇಳಿಬಂದಿದೆ.
ಮುಸ್ಲಿಂ ಧರ್ಮದ ಉನ್ನತ ಅಧ್ಯಯನ ಒದಗಿಸುವ 142 ವರ್ಷ ಹಳೆಯ ಸಂಸ್ಥೆಯಾದ ಜಾಮಿಯಾ ನಿಜಾಮಿಯಾ ಕಳೆದ ವರ್ಷ ಮುಸ್ಲಿಮರು 'ಭಾರತ್‌ ಮಾತಾ ಕೀ ಜೈ' ಘೊಷಣೆ ಕೂಗುವಂತಿಲ್ಲ ಎಂದು ಫತ್ವಾ ಹೊರಡಿಸಿ ವಿವಾದಕ್ಕೀಡಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments