ಜಮ್ಮು ಮತ್ತು ಕಾಶ್ಮೀರ: ಕುಪ್ವಾರ ಹಿಮಪಾತ, ಆರು ಶವಗಳ ಹೊರತೆಗೆದ ಸಿಬ್ಬಂದಿ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ನಾಪತ್ತೆಯಾಗಿದ್ದ 6 ಮಂದಿಯ ಮೃತದೇಹಗಳನ್ನು ಭದ್ರತಾ ಸಿಬ್ಬಂದಿಗಳು ಶನಿವಾರ ಹೊರತೆಗೆದಿದ್ದಾರೆಂದು ತಿಳಿದುಬಂದಿದೆ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ನಾಪತ್ತೆಯಾಗಿದ್ದ 6 ಮಂದಿಯ ಮೃತದೇಹಗಳನ್ನು ಭದ್ರತಾ ಸಿಬ್ಬಂದಿಗಳು ಶನಿವಾರ ಹೊರತೆಗೆದಿದ್ದಾರೆಂದು ತಿಳಿದುಬಂದಿದೆ.
ಕುಪ್ವಾರ ಜಿಲ್ಲೆ ಖೂನಿ ನಲ್ಲಾಹ್ ಎಂಬ ಪ್ರದೇಶದಲ್ಲಿ ಪ್ರಯಾಣಿಕ ವಾಹನದ ಮೇಲೆ ಹಿಮಪರ್ವತವೊಂದು ಕುಸಿದು ಬಿದ್ದಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, 7 ಮಂದಿ ನಾಪತ್ತೆಯಾಗಿದ್ದರು.
ಬಳಿಕ ಭದ್ರತಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಇದೀಗ 6 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಮಪಾತದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಲಾಗಿತ್ತು. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಕುಪ್ವಾರದ ಉಪ ಆಯುಕ್ತ ಖಾಲಿದ್ ಜೆಹಾಂಗೀರ್ ಅವರು ಹೇಳಿದ್ದಾರೆ.