ದೇಶ

ಮಹಾತ್ಮ ಗಾಂಧಿ ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್ ಗೆ ಮಾಜಿ ಎಎಸ್‏ಜಿ ಸರಣ್ ವರದಿ ಸಲ್ಲಿಕೆ

Srinivasamurthy VN
ನವದೆಹಲಿ: ಸ್ವತಂತ್ರ್ಯ ಹೋರಾಟಗಾರ ಮಹಾತ್ಮಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಸರಣ್ ಅವರು ಸೋಮವಾರ ಸುಪ್ರೀಂ ಕೋರ್ಟ್ ಗೆ ತಮ್ಮ ವರದಿ ಸಲ್ಲಿಕೆ ಮಾಡಿದ್ದಾರೆ.
ಮಹಾತ್ಮಗಾಂಧಿ ಹತ್ಯೆ ಪ್ರಕರಣ ಸಂಬಂಧ ಆ್ಯಮಿಕಸ್ ಕ್ಯೂರಿ ಕೂಡ ಆಗಿರುವ ಸರಣ್ ಅವರು, ಪ್ರಕರಣ ಸಂಬಂಧ ಇಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಮುಂಬೈ ಮೂಲದ ಐಟಿ ಕನ್ಸಲ್ ಟೆಂಟ್ ಪಂಕಜ್ ಕುಮುಚಂದ್ರ ಫಡ್ನಿಸ್ ಹೈಕೋರ್ಟ್ ನಲ್ಲಿ ಮಹಾತ್ಮಗಾಂಧಿ ಹತ್ಯೆ ಪ್ರಕರಣದ ಮರು ತನಿಖೆ ನಡೆಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಅಂದು ಹೈಕೋರ್ಟ್ ಫಡ್ನಿಸ್ ಅವರ ಅರ್ಜಿಯನ್ನು ತಳ್ಳಿಹಾಕಿತ್ತು. 
ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಫಡ್ನಿಸ್ ಪ್ರಕರಣ ಮರು ವಿಚಾರಣೆಗೆ ಪಿಐಎಲ್ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು. ಅರ್ಜಿ ಸ್ವೀಕರಿಸಿದ್ದ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಪಡೆಯಬೇಕೇ ಅಥವಾ ಇಲ್ಲವೇ ಎಂಬ ನಿರ್ಧಾರದ ಸಂಬಂಧ ಕೋರ್ಟ್ ಗೆ ಸಲಹೆ ನೀಡುವಂತೆ ನಿವೃತ್ತ ಸಾಲಿಸಿಟರ್ ಜನರಲ್ ಸರಣ್ ಅವರಿಗೆ ಸೂಚಿಸಿತ್ತು. ಅಲ್ಲದೆ ಪ್ರಕರಣದಲ್ಲಿ ಆ್ಯಮಿಕಸ್ ಕ್ಯೂರಿ ಆಗಿ ಕಾರ್ಯ ನಿರ್ವಹಣೆ ಮಾಡುವಂತೆ ಕೇಳಿತ್ತು.
SCROLL FOR NEXT