ಸಾಂದರ್ಭಿಕ ಚಿತ್ರ 
ದೇಶ

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೆ ಮುನ್ನುಡಿ, ಜ.12ಕ್ಕೆ 100ನೇ ಉಪಗ್ರಹವನ್ನು ಕಕ್ಷೆಗೆ ಏರಿಸಲಿರುವ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜನವರಿ 12ರಂದು ತನ್ನ 100 ನೇ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಮೀಲಕ ಕಕ್ಷೆಗೆ ಸೇರಿಸಲಿದೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜನವರಿ  12ರಂದು  ತನ್ನ 100 ನೇ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಮೀಲಕ ಕಕ್ಷೆಗೆ ಸೇರಿಸಲಿದೆ.
"ನಾವು ಮೈಕ್ರೋಸ್ಯಾಟ್ ಹಾಗೂ ನ್ಯಾನೋಸ್ಯಾಟ್ ಮುಂತಾದ ವಿವಿಧ ಉಪಗ್ರಹಗಳ ಸಮೂಹವನ್ನು ಹೊಂದಿರುತ್ತೇವ. ಇದುವರೆಗೆ ಪಿಎಸ್ ಎಲ್ ವಿ ಉಡಾವಣಾ ವಹನದ ಮೂಲಕ ಒಟ್ಟು 31 ಉಪಗ್ರಹಗಳನ್ನು ಕಖ್ಷೆಗೆ ಕಳಿಸಲಾಗಿದ್ದು ಇದರಲ್ಲಿ 28 ವಿದೇಶೀ ಉಪಗ್ರಹಗಳಾದರೆ ಮೂರು ಭಾರತೀಯ ಉಪಗ್ರಹಗಳಾಗಿದೆ " ಇಸ್ರೋ ಕೇಂದ್ರದ ನಿರ್ದೇಶಕ ಎಂ. ಅಣ್ಣಾದೊರೈ ಹೇಲಿದ್ದಾರೆ.
ಇಸ್ರೋ ಉಪಗ್ರಹ ಉಡಾವಣೆಯಲ್ಲಿ ಇತ್ತೀಚಿನ ವಿಫಲತೆಯ ಕುರಿತು ಮಾತನಾಡಿ, ಇಸ್ರೋ ನಲ್ಲಿನ ವಿಜ್ಞಾನಿಗಳು ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಭವಿಷ್ಯದಲ್ಲಿ ಸಮಸ್ಯೆ ಪುನರಾವರ್ತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪುನರ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದರು.
ಪಿಎಸ್ ಎಲ್ ವಿ ಗೆ ಇದು 42ನೇ ಉದಾವಣೆಯಾಗಿದ್ದು 710ಕೆಜಿ ಕಾರ್ಟೋಸ್ಯಾಟ್, ಭೂ ವೀಕ್ಷಣೆಗಾಗಿ ಎರಡು ಸರಣಿ  ಉಪಗ್ರಹ, 613ಕೆಜಿ ಒತ್ಟು ತೂಕದ 30 ಸಹ ಉಪಗ್ರಹಗಳನ್ನು ಹೊತ್ತಿರುವ ಪಿಎಸ್ ಎಲ್ ವಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉದಾವಣೆಗೊಳ್ಳಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT