'ಓಲ್ಡ್ ಮಾಂಕ್ ರಮ್' ಸೃಷ್ಟಿಕರ್ತ ಕಪಿಲ್ ಮೋಹನ್
ನವದೆಹಲಿ: ದೇಶದ ಚಿರಪರಿಚಿತ ಸಾಂಪ್ರದಾಯಿಕ 'ಓಲ್ಡ್ ಮಾಂಕ್ ರಮ್' ಸೃಷ್ಟಿಕರ್ತ ಕಪಿಲ್ ಮೋಹನ್ (88) ಅವರು ಶನಿವಾರ ನಿಧನಹೊಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೃದಯ ಸ್ತಂಭನದಿಂದಾಗಿ ಕಪಿಲ್ ಮೋಹನ್ ಅವರು ಘಾಜಿಯಾಬಾದ್'ನಲ್ಲಿರುವ ತಮ್ಮ ನಿವಾಸದಲ್ಲಿ ಜ.6 ರಂದು ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ.
1954ರಲ್ಲಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದ 'ಓಲ್ಡ್ ಮಾಂಕ್ ರಮ್" ವಿಶ್ವದಾದ್ಯಂತ ಅತೀ ಹೆಚ್ಚು ಮಾರಾಟವಾದ ಡಾರ್ಕ್ ರಮ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಅಲ್ಲದೆ, ಭಾರತದಲ್ಲಿಯೇ ತಯಾರಿಸಿದ್ದ ವಿದೇಶಿ ಲಿಕರ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು.
2 ವರ್ಷಗಳ ಹಿಂದಷ್ಟೇ ಓಲ್ಡ್ ಮಾಂಕ್ ಕಂಪನಿಯ ಉತ್ಪನ್ನಗಳ ಮಾರಾಟ ಕುಸಿದಿರುವ ಪರಿಣಾಮ ಕಂಪನಿಯು ತನ್ನ ಉತ್ಪನ್ನಗಳ ಮಾರಾಟವನ್ನು ಬಂದ್ ಮಾಡುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಮಾರಾಟ ಮಂಕಾದರೂ ಇಂದಿಗೂ ಓಲ್ಡ್ ಮಾಂಕ್ ರಮ್ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.