ದೇಶ

2017ರಲ್ಲಿ ಭಾರತೀಯ ಸೇನೆಯಿಂದ 138 ಪಾಕ್ ಸೈನಿಕರ ಹತ್ಯೆ: ಗುಪ್ತಚರ ವರದಿ

Sumana Upadhyaya
ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಭಾರತೀಯ ಸೇನೆ 
ಯುದ್ಧತಂತ್ರದ ಕಾರ್ಯಾಚರಣೆಗಳು ಮತ್ತು ಪ್ರತೀಕಾರ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ 2017ರಲ್ಲಿ 138 ಪಾಕಿಸ್ತಾನ ಸೇನಾ ಸಿಬ್ಬಂದಿಯನ್ನು ಕೊಂದಿದೆ ಎಂದು ಸರ್ಕಾರದ ಗುಪ್ತಚರ ಇಲಾಖೆ ತಿಳಿಸಿದೆ.
ಇದೇ ವರ್ಷ ಭಾರತೀಯ ಸೇನೆಯ 28 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ಪಾಕಿಸ್ತಾನ ಸೇನೆ ಸಾಮಾನ್ಯವಾಗಿ ತನ್ನ ಸೈನಿಕನ ಸಾವನ್ನು ಒಪ್ಪಿಕೊಳ್ಳುವುದಿಲ್ಲ ಕೆಲವು ಸಂದರ್ಭಗಳಲ್ಲಿ ಅವುಗಳನ್ನು ನಾಗರಿಕ ಸಾವುನೋವು ಎಂದು ತೋರಿಸುತ್ತದೆ ಎಂದು ಮೂಲಗಳು ಹೇಳಿವೆ.
ಕದನ ವಿರಾಮ ಉಲ್ಲಂಘನೆ ವಿಷಯದಲ್ಲಿ ಮತ್ತು ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತೀಯ ಸೇನೆ ಕಠಿಣ ನಿಲುವು ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನ ಸೇನೆ ಯುದ್ಧತಂತ್ರದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯಲ್ಲಿ 138 ಮಾರಣಾಂತಿಕ ಮತ್ತು 155 ಸಾವು ನೋವುಗಳು ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾಪಡೆಯ ಉಲ್ಲಂಘನೆಯಿಂದಾಗಿ ಆಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆ ಉಲ್ಲಂಘನೆ ಮತ್ತು ಇತರ ಘಟನೆಗಳಲ್ಲಿ  70 ಮಂದಿ ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
SCROLL FOR NEXT