ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ತಡೆಗೆ 'ವರ್ಚ್ಯುಯಲ್ ಐಡಿ' ಪರಿಚಯಿಸಿದ ಯುಐಡಿಎಐ

ಅಕ್ರಮವಾಗಿ ಆಧಾರ್ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ....

ಸಾಂದರ್ಭಿಕ ಚಿತ್ರ
Lingaraj Badiger
Updated On : 10 Jan 2018, 5:58 am
ನವದೆಹಲಿ: ಅಕ್ರಮವಾಗಿ ಆಧಾರ್ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ), ಖಾಸಗಿತನದ ರಕ್ಷಣೆಗಾಗಿ 'ವರ್ಚ್ಯುಯಲ್ ಐಡಿ' ಎಂಬ ಹೊಸ ಪರಿಕಲ್ಪನೆಯನ್ನು ಬುಧವಾರ ಪರಿಚಿಯಿಸಿದೆ. 
ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ಇನ್ನು ಮುಂದೆ ತಾನು ನೀಡಿದ ದತ್ತಾಂಶ ರಕ್ಷಣೆಗಾಗಿ ಯುಐಡಿಎಐ ವೆಬ್ ಸೈಟ್ ನಿಂದ 'ವರ್ಚ್ಯುಯಲ್ ಐಡಿ'  ಪಡೆದುಕೊಂಡು ಅದನ್ನು ಸಿಮ್ ಪರಿಶೀಲನೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಆಧಾರ್ ಕಾರ್ಡ್ ಬದಲು ಬಳಸಬಹುದು ಎಂದು ಹೇಳಿದೆ.
ಈ ಹೊಸ ಪರಿಕಲ್ಪನೆಯಲ್ಲಿ ಆಧಾರ್ ಸಂಖ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರುವ ಆಯ್ಕೆಯನ್ನು ನೀಡಲಾಗಿದೆ. 'ವರ್ಚ್ಯುಯಲ್ ಐಡಿ' 16 ಸಂಖ್ಯೆಯನ್ನು ಹೊಂದಿದ್ದು, ಆಧಾರ್ ಕಾರ್ಡ್ ನೊಂದಿಗೆ ಇದನ್ನು ಬಳಸಬಹುದಾಗಿದೆ. 'ವರ್ಚ್ಯುಯಲ್ ಐಡಿ' ಮೂಲಕ ಮಾಹಿತಿಯನ್ನು ಕೇವಲ ಹೆಸರು, ವಿಳಾಸ ಮತ್ತು ಫೋಟೋಗೆ ಮಾತ್ರ ಸೀಮಿತಗೊಳಿಸಲಾಗಿದೆ ಮತ್ತು ಯಾವುದೇ ಪರಿಶೀಲನೆಗೆ ಇದು ಸಾಕಾಗುತ್ತದೆ ಎಂದು ಯುಐಡಿಎಐ ಹೇಳಿದೆ.

Advertisement

Advertisement

ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಹಲವು 'ವರ್ಚ್ಯುಯಲ್ ಐಡಿ' ಪಡೆದುಕೊಳ್ಳಲು ಅವಕಾಶವಿದ್ದು, ಹೊಸ 'ವರ್ಚ್ಯುಯಲ್ ಐಡಿ' ಪಡೆದಾಗ ಹಳೆಯ ಐಡಿ ರದ್ದಾಗುತ್ತದೆ ಎಂದು ಯುಐಡಿಎಐ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments