ಚೀನಾದ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ
ಏಷ್ಯಾವನ್ನು ಯುರೋಪ್ ನೊಂದಿಗೆ ಜೋಡಿಸುವ ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ ಎದುರಾಗಿದೆ.
ಬೀಜಿಂಗ್: ಏಷ್ಯಾವನ್ನು ಯುರೋಪ್ ನೊಂದಿಗೆ ಜೋಡಿಸುವ ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ ಎದುರಾಗಿದೆ.
ಪಾಕಿಸ್ತಾನದಿಂದ ಹಾದುಹೋಗುವ ಸುಮಾರು 14 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗೆ ಪಾಕಿಸ್ತಾನದಿಂದಲೇ ಕೆಲವೊಂದು ಅಡ್ಡಿ ಉಂಟಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಡೈಮರ್-ಬಾಷಾ ಡ್ಯಾಂ ಯೋಜನೆಗೆ ಸಂಬಂಧಿಸಿದಂತೆಯೂ ಗೊಂದಲ ಉಂಟಾಗಿತ್ತು, ಈ ಬಗ್ಗೆ ನವೆಂಬರ್ ತಿಂಗಳಲ್ಲಿ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಜಲಸಂಪನ್ಮೂಲ ಪ್ರಾಧಿಕಾರದ ಅಧ್ಯಕ್ಷ ಚೀನಾ ಡ್ಯಾಂ ಗೆ ಸಂಬಂಧಿಸಿದ ಹೈಡ್ರೋ ಪವರ್ ಯೋಜನೆಯಲ್ಲಿ ಮಾಲಿಕತ್ವದ ಪಾಲನ್ನು ಕೇಳಿತ್ತು, ಇದು ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಪಸ್ವರವೆತ್ತಿದ್ದರು. ಕೊನೆಗೆ ಉಭಯ ದೇಶಗಳೂ ಒಟ್ಟಾಗಿ ಅಭಿವೃದ್ಧಿಪಡಿಸುತ್ತಿರುವ ಯೋಜನೆಗಳ ಪಟ್ಟಿಯಿಂದ ಡ್ಯಾಮ್ ಯೋಜನೆಯನ್ನು ಹಿಂಪಡೆಯಲಾಗಿತ್ತು.
ಚೀನಾ ಸಂಸ್ಥೆಗಳಿಂದ ನಿರ್ಮಾಣವಾಗುತ್ತಿರುವ ಯೋಜನೆಗಳಿಂದ ಅತ್ಯಂತ ಕಡಿಮೆ ಲಾಭವಾಗಲಿದೆ,ಅಷ್ಟೇ ಅಲ್ಲದೇ ಬೀಜಿಂಗ್ ನಿಂದ ದೊರೆತಿರುವ ಸಾಲವನ್ನು ಮರುಪಾವತಿ ಮಾಡಬೇಕು ಎಂಬ ಕಾರಣಕ್ಕಾಗಿ ಒಬಿಒಆರ್ ಅಡಿಯಲ್ಲಿ ಬರುವ ಪಾಕಿಸ್ತಾನ-ಟಾಂಜಾನಿಯಾ-ಹಂಗರಿ ನಡುವಿನ ಯೋಜನೆಗಳು ರದ್ದುಗೊಂಡಿದ್ದರೆ, ಕೆಲವೊಂದು ಯೋಜನೆಗಳು ವಿಳಂಬವಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.