ಮುಂಬೈ: 14 ಜನರ ಮಂದಿಗೆ ಸಾವಿಗೆ ಕಾರಣವಾದ ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್ ನ ಅಗ್ನಿ ಅವಘಡ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಒನ್ ಅಬೋವ್ ಪಬ್ ಮಾಲೀಕರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 29ರ ರಾತ್ರಿ ಒನ್ ಅಬೋವ್ ಪಬ್ ನಲ್ಲಿ ಆಯೋಜನೆಯಾಗಿದ್ದ ಜನ್ಮದಿನದ ಪಾರ್ಟಿ ವೇಳೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆ ಬೆನ್ನಲ್ಲೇ ಒನ್ ಅಬೋವ್ ಪಬ್ ಮತ್ತು ಮೋಜೋಸ್ ಬಿಸ್ಚ್ರೋ ಪಬ್ ಮಾಲೀಕರು ನಾಪತ್ತೆಯಾಗಿದ್ದರು. ಇತ್ತೀಚೆಗೆ ಕಾರ್ಯಚರಣೆ ನಡೆಸಿದ್ದ ಮುಂಬೈ ಪೊಲೀಸರು ಮೋಜೋಸ್ ಬಿಸ್ಚ್ರೋ ಪಬ್ ಮಾಲೀಕನನ್ನು ಬಂಧಿಸಿದ್ದರಾದರೂ, ಒನ್ ಅಬೋವ್ ಪಬ್ ನ ಮಾಲೀಕರಾದ ಸಂಘವಿ ಸಹೋದರರು ಮಾತ್ರ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಬಂಧನಕ್ಕೆ ಬಲೆ ಬೀಸಲಾಗಿತ್ತು.
ಅಲ್ಲದೆ ಪಬ್ ಮಾಲೀಕರ ಬಂಧನಕ್ಕಾಗಿ ಪೊಲೀಸರು ಅವರ ಭಾವಚಿತ್ರಗಳಿರುವ ಪೋಸ್ಟರ್ ಗಳನ್ನು ಕೂಡ ಕಮಲಾಮಿಲ್ಸ್ ಕಾಪೌಂಡ್ ನಲ್ಲಿ ಅಂಟಿಸಿದ್ದರು. ಅಲ್ಲದ ಇವರ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನ ಕೂಡ ಘೋಷಣೆ ಮಾಡಿದ್ದರು. ಇದೀಗ ಕಾರ್ಯಾಚರಣೆ ನಡೆಸಿ ಈ ಇಬ್ಬರು ಮಾಲೀಕರನ್ನು ಕೂಡ ಪೊಲೀಸರು ಅಂಧೇರಿ ಪ್ರದೇಶದಲ್ಲಿ ಬಂಧಿಸಿದ್ದು, ನಿನ್ನೆಯಷ್ಟೇ ಪೊಲೀಸರ ಎಚ್ಚರಿಕೆ ಹೊರತಾಗಿಯೂ ಸಂಘವಿ ಸಹೋದರರಿಗೆ ರಕ್ಷಣೆ ನೀಡಿದ್ದ ಮತ್ತೋರ್ವ ಹೊಟೆಲ್ ಉದ್ಯಮಿ ವಿಶಾಲ್ ಕರಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು ಪ್ರಕರಣದ ಮತ್ತೋರ್ವ ಆರೋಪಿ ಪಬ್ ಸಹ ಮಾಲೀಕ ಮಂಕರ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೂ ಪೊಲೀರು ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics