ಸಾಂದರ್ಭಿಕ ಚಿತ್ರ 
ದೇಶ

ಪವನ್ ಹಾನ್ಸ್ ಕ್ಯಾಪ್ಟರ್ ಅವಶೇಷ ಪತ್ತೆ, ನಾಲ್ವರ ಮೃತದೇಹ ಪತ್ತೆ

ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಶನಿವಾರ ಬೆಳಗ್ಗೆ ಇಲ್ಲಿನ ಜುಹು ವಿಮಾನ ನಿಲ್ದಾಣದಿಂದ ....

ಮುಂಬೈ: ಪವನ್  ಹಾನ್ಸ್ ಹೆಲಿಕಾಪ್ಟರ್ ಶನಿವಾರ ಬೆಳಗ್ಗೆ ಇಲ್ಲಿನ ಜುಹು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಕಣ್ಮರೆಯಾಗಿದ್ದು, ಮುಂಬೈ ತೀರದಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಅವಶೇಷ ಪತ್ತೆಯಾಗಿದ್ದು, ನಾಲ್ವರ ಮೃತದೇಹ ಸಿಕ್ಕಿದೆ.
ಹೆಲಿಕಾಪ್ಟರ್ ನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಧಿಕಾರಿಗಳು(ಒಎನ್ ಜಿಸಿ) ಸೇರಿದಂತೆ ಕನಿಷ್ಠ 5 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಾಫಿನ್ ಚಾಪರ್, ವಿಟಿ ಪಿಡಬ್ಲ್ಯುಎ ಇಂದು ಬೆಳಗ್ಗೆ 10.20ಕ್ಕೆ ಜುಹು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಯಿತು. ನಂತರ ಕೇವಲ 15 ನಿಮಿಷಗಳಲ್ಲಿಯೇ ಮುಂಬೈಯ ಎಟಿಸಿ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮಗಳಿಂದ ಸಂಪರ್ಕ ಕಳೆದುಕೊಂಡಿತು.
ಮುಂಬೈ ತೀರಪ್ರದೇಶದಿಂದ ಒಎನ್ ಜಿಸಿ ಮುಂಬೈ ಹೈ ತೈಲ ನಿಕ್ಷೇಪ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ 55 ಕಿಲೋ ಮೀಟರ್ ದೂರದಲ್ಲಿ 175 ಕಿಲೋ ಮೀಟರ್ ವಾಯುವ್ಯ ದಿಕ್ಕಿನಲ್ಲಿ ಹಾರಾಟ ಮಾಡುತ್ತಿದೆ ಎಂದು ಭಾವಿಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ