ಜೈಪುರ: ಪದ್ಮಾವತ್ ಹೆಸರಿನಲ್ಲಿ ಬಿಡುಗಡೆಗೆ ತಯಾರಾಗಿರುವ ಪದ್ಮಾವತಿ ಚಿತ್ರದ ಬಿಡುಗಡೆಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಚಿತ್ರ ಬಿಡುಗಡೆ ಆಗಿದ್ದೇ ಆದಲ್ಲಿ ಅಗ್ನಿ ಪ್ರವೇಶ ಮಾಡುವುದಾಗಿ ಮಹಿಳೆಯೊಬ್ಬರು ಬೆದರಿಕೆ ಹಾಕಿದ್ದಾರೆ.
ಚಿತ್ತೋರ್ಘರ್ ನಲ್ಲಿ ನಡೆದ ಸರ್ವಸಮಾಜ ಸಭೆಯಲ್ಲಿ ಪದ್ಮಾವತಿ ಚಿತ್ರದ ಬಿಡುಗಡೆಯಾದರೆ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಒಟ್ಟು 500 ಜನರು ಭಾಗವಹಿಸಿದ್ದ ಸಭೆಯಲ್ಲಿ 100 ಮಹಿಳೆಯರೂ ಇದ್ದರು. ಚಿತ್ರ ಬಿದುಗಡೆಯಾಗಿದ್ದೇ ಆದಲ್ಲಿ ರಜಪೂತ್ ಕರಣಿ ಸೇನಾ ರೈಲು ಹಾಗೂ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಇದೇ ವೇಳೆ ಮಹಿಳೆಯರೂ ಸಹ ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಓರ್ವ ಮಹಿಳೆ ಪದ್ಮಾವತಿ ಚಿತ್ರ ಬಿಡುಗಡೆಯಾಗಿದ್ದೇ ಆದರೆ ಅಗ್ನಿ ಪ್ರವೇಶ(ಜೌಹಾರ್) ಮಾಡುವುದಾಗಿ ಹೇಳಿದ್ದಾರೆ.