ಅನುಜ್ 
ದೇಶ

ನ್ಯಾ.ಲೋಯ ಸಾವು: ನಮಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದ ಲೋಯ ಪುತ್ರ ಅನುಜ್

ನ್ಯಾಯಮೂರ್ತಿ ಬಿಎಸ್ ಲೋಯ ಸಾವಿನ ಕುರಿತು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಈ ಮಧ್ಯೆ ನನ್ನ ತಂದೆಯ ಸಾವು ಕುಟುಂಬದಲ್ಲಿ ಸಾಕಷ್ಟು ನೋವು ತಂದಿದೆ...

ನವದೆಹಲಿ: ನ್ಯಾಯಮೂರ್ತಿ ಬಿಎಸ್ ಲೋಯ ಸಾವಿನ ಕುರಿತು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಈ ಮಧ್ಯೆ ನನ್ನ ತಂದೆಯ ಸಾವು ಕುಟುಂಬದಲ್ಲಿ ಸಾಕಷ್ಟು ನೋವು ತಂದಿದೆ. ನಮ್ಮ ತಂದೆಯ ಸಾವಿನ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಲೋಯ ಅವರ ಪುತ್ರ ಅನುಜ್ ಹೇಳಿದ್ದಾರೆ. 
ಸಾಕಷ್ಟು ಬೆಳವಣಿಗೆಗಳ ನಂತರ ಭಾನುವಾರ ಮಾಧ್ಯಮದವರ ಮುಂದೆ ಬಂದ ನ್ಯಾಯಮೂರ್ತಿ ಲೋಯ ಪುತ್ರ ಅನುಜ್, ಈ ಮೊದಲು ನಮ್ಮ ತಂದೆಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿತ್ತು. ಆದರೆ ಈಗ ಎಲ್ಲವೂ ಪರಿಹಾರವಾಗಿದೆ ಎಂದು ಹೇಳಿದ್ದಾರೆ. 
ಸೋಹ್ರಬುದ್ದೀನ್  ಶೇಖ್ ಪತ್ನಿ ಕೌಸರ್ ಬಿ, ಸಹವರ್ತಿ ತುಳಸಿ ಪ್ರಜಾಪತಿ ಅವರು 2005ರಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೃತಪಟ್ಟ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಲೋಯ ಅವರು 2014ರ ಡಿಸೆಂಬರ್ 1ರಂದು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ