ಭಾರತಕ್ಕೆ ಆಗಮಿಸಿದ ಇಸ್ರೇಲ್ ಪ್ರಧಾನಿ ಸ್ವಾಗತಿಸಿದ ಪ್ರಧಾನಿ ಮೋದಿ 
ದೇಶ

ನಮ್ಮದು ಸ್ವರ್ಗದಲ್ಲೇ ನಿಶ್ಚಯವಾದ ಸಂಬಂಧ: ಭಾರತದ ಕುರಿತು ಇಸ್ರೇಲ್ ಪ್ರಧಾನಿ ಹೇಳಿಕೆ

ನಮ್ಮದು ಸ್ವರ್ಗದಲ್ಲೇ ನಿಶ್ಟಯವಾದ ಸಂಬಂಧವಾಗಿದ್ದು, ರಾಜಧಾನಿ ಜೆರುಸಲೇಂ ವಿವಾದ ಕುರಿತ ವಿಶ್ವಸಂಸ್ಥೆ ಮತದಾನ ವಿಚಾರ ಉಭಯ ದೇಶಗಳ ನಡುವಿನ ಸಂಬಂಧದ ಪರಿಣಾಮ ಬೀರದು ಎಂದು ಭಾರತದ ಕುರಿತು ಇಸ್ರೇಲ್ ಪ್ರಧಾನಿ ನೆತಾನ್ಯಹು ಹೇಳಿದ್ದಾರೆ.

ನವದೆಹಲಿ: ನಮ್ಮದು ಸ್ವರ್ಗದಲ್ಲೇ ನಿಶ್ಟಯವಾದ ಸಂಬಂಧವಾಗಿದ್ದು, ರಾಜಧಾನಿ ಜೆರುಸಲೇಂ ವಿವಾದ ಕುರಿತ ವಿಶ್ವಸಂಸ್ಥೆ ಮತದಾನ ವಿಚಾರ ಉಭಯ ದೇಶಗಳ ನಡುವಿನ ಸಂಬಂಧದ ಪರಿಣಾಮ ಬೀರದು ಎಂದು ಭಾರತದ  ಕುರಿತು ಇಸ್ರೇಲ್ ಪ್ರಧಾನಿ ನೆತಾನ್ಯಹು ಹೇಳಿದ್ದಾರೆ.
6 ದಿನಗಳ ಭಾರತ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರನ್ನು ಖುದ್ಧು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದರು. ಶಿಷ್ಟಾಚಾರ ಮೀರಿ ಭಾರತ  ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಅವರನ್ನು ಸ್ವಾಗತಿಸಿದ್ದು, ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯದ ಪ್ರತೀಕವಾಗಿದೆ. ಈ ವೇಳೆ ಭಾರತಕ್ಕೆ ಆಗಮಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್  ನೆತಾನ್ಯಹು ಅವರು, ತಮ್ಮ ಭಾರತ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ರಾಜಧಾನಿ ಜೆರುಸಲೇಂ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ಧ  ಭಾರತ ಮತದಾನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ನೆತಾನ್ಯಹು, ಖಂಡಿತಾ ಭಾರತದ ನಡೆ ಬೇಸರ  ಮೂಡಿಸಿತ್ತು. ಆದರೆ ಒಂದು ನಕಾರಾತ್ಮಕ ಮತ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರದು. ಆದರೆ ನಾವು ಇವೆಲ್ಲವನ್ನೂ ಬದಿಗೊತ್ತಿ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಹೇಳಿದರು. ಅಂತೆಯೇ  ಭಾರತ ಮತ್ತು ಇಸ್ರೇಲ್ ಸಂಬಂಧವನ್ನು ಸ್ವರ್ಗದಲ್ಲಿ ನಿಶ್ಚಯವಾದ ಸಂಬಂಧ ಎಂದು ಬಣ್ಣಿಸಿದ ನೇತನ್ಯಹು, ಸಾಕಷ್ಟು ಕ್ಷೇತ್ರಗಳಲ್ಲಿ ಉಭಯ ದೇಶಗಳು ಸೌಹಾರ್ಧ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕಿದೆ. ರಕ್ಷಣೆ, ಕೃಷಿ,  ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರ ಅತ್ಯಗತ್ಯ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT